ಬಂಟಕಲ್ಲು : ಆಟಿಡೊಂಜಿದಿನ ಸಂಭ್ರಮ
Posted On:
16-07-2023 10:45PM
ಬಂಟಕಲ್ಲು : ಶ್ರೀ ವಿಶ್ವಕರ್ಮ ಸಂಘ ಬಂಟಕಲ್ಲು ಇದರ ಗಾಯತ್ರಿ ಮಹಿಳಾ ಬಳಗದ ವತಿಯಿಂದ ಅಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಂಜರಪಲ್ಕೆ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಗಾಯತ್ರಿ ಅಶೋಕ ಆಚಾರ್ಯ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಮುಂದಿನ ಜನಾಂಗದ ಏಳಿಗೆಗಾಗಿ ನಮ್ಮ ಬದುಕಿನ ಚಿತ್ರಣ, ಕಷ್ಟದ ಜೀವನದ ಬದುಕು ತಿಳಿಯಬೇಕಿದ್ದರೆ ನಮ್ಮ ಆಚರಣೆಗಳು ತಿಳಿಸುವುದು ಅತ್ಯವಶ್ಯಕ ಅಂತ ಕಾರ್ಯಕ್ರಮ ರೂಪಿಸುವ ಸಂಸ್ಥೆಗೆ ನಾವು ತಲೆಬಾಗಲೇಬೇಕು ಶಾಲೆಗೆ ಕಳಿಸುವುದು ಪಾಠವಲ್ಲ ಅದನ್ನು ನಮ್ಮ ಜೀವನದ ಬದುಕು ಮಕ್ಕಳಿಗೆ ತಿಳಿಸುವುದು ಮತ್ತು ಅದನ್ನು ಅಳವಡಿಸಿಕೊಳ್ಳುವಲ್ಲಿ ಮಹಿಳೆಯರು ಜವಾಬ್ದಾರಿಯುತರಾಗಿರಬೇಕು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಗಣಪತಿ ಆಚಾರ್ಯರು ಹಿಂದಿನ ಕಷ್ಟ ಕಾಲದ ಬದುಕು ಇಂದಿಲ್ಲ. ಮುಂದಿನ ಜನಾಂಗಕ್ಕೆ ಜೀವನ ಚಿತ್ರಣ ನೀಡುವ ಉತ್ತಮ ಕಾರ್ಯಕ್ರಮ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಮುರಳೀಧರ ಆಚಾರ್ಯ, ಯುವಕ ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 12 ವರ್ಷ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸಿದ ವಸಂತಿ ಅಶೋಕ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಶಾಲಿನಿ ದಾಮೋದರಾಚಾರ್ಯ ಆಚಾರ್ಯ ಪ್ರಾರ್ಥಿಸಿದರು. ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಸ್ವಾಗತಿಸಿದರು. ಶ್ರೀಮತಿ ವಿನುತಾ ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಆಶಾ ಆನಂದ ಆಚಾರ್ಯ ವಂದಿಸಿದರು.
ಸುಮಾರು 35 ಬಗೆಯ ತಿನಿಸುಗಳನ್ನು ಉಣಬಡಿಸಲಾಯಿತು