ಪಡುಬಿದ್ರಿ : ಟಿಪ್ಪರ್‌ನ ಹಿಂಬದಿಗೆ ಸಿಲುಕಿದ ಕಾರು ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ; ಪ್ರಕರಣ ದಾಖಲು
Posted On:
17-07-2023 07:05PM
ಪಡುಬಿದ್ರಿ : ಟಿಪ್ಪರ್‌ನ ಹಿಂಬದಿಗೆ ಸಿಲುಕಿದ ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರ ಟಿಪ್ಪರ್ ಎಳೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ
ಪಡುಬಿದ್ರಿಯಲ್ಲಿ ನಡೆದಿದೆ.
ಕಾರು ಸಾಗರದಿಂದ ಮಂಗಳೂರು ಕಡೆ ಹಾಗೂ ಟಿಪ್ಪರ್ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಬಳಿಕ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಬೈಯ್ದು ನಿಲ್ಲಿಸಿದ್ದು, ಪಡುಬಿದ್ರಿ ಪೊಲೀಸರು ಟಿಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯವಾಗಿದ್ದು, ಗಾಯಗಳನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.