ನಾಗರೀಕ ಸೇವಾ ಸಮಿತಿ (ರಿ) ಬಂಟಕಲ್ಲು ಇವರ ಮಹತ್ವಾಕಾಂಕ್ಷೆ ಯೋಜನೆ ಬಂಟಕಲ್ಲು ಪರಿಸರದ ನಾಗರಿಕರಿಗೆ ಅಪಘಾತ ಮುಂತಾದ ತುರ್ತು ಸಂಧರ್ಭದಲ್ಲಿ ಉಪಯೋಗವಾಗುವ ನಿಟ್ಟಿನಲ್ಲಿ ಉಚಿತ ಸೇವೆಯ ಅಂಬುಲೆನ್ಸ್ ಸೇವೆ ಯನ್ನು ನೀಡುವ ಸಲುವಾಗಿ ಖರೀದಿಸಿದ ನೂತನ ಅಂಬುಲೆನ್ಸ್ ವಾಹನ ಸೇವೇಯನ್ನು ಪಾಂಬೂರ್ ಚರ್ಚ್ ನ ಧರ್ಮಗುರುಗಳಾದ ರೆ.ಫಾ ಹೆನ್ರಿ ಮೆಸ್ಕರೇನಸ್ರವರು ಹಸಿರು ನಿಶಾನೆ ತೋರುವುದರ ಮೂಲಕ ಲೋಕಾರ್ಪಣೆಗೈದರು. ಬಂಟಕಲ್ಲು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶಶಿಧರ ವಾಗ್ಲೆ, ಶಿರ್ವ ಗ್ರಾ.ಪಂ ಆಡಳಿತಾಧಿಕಾರಿ ಡಾ. ಅರುಣ್ ಹೆಗ್ಡೆ, ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಶಿರ್ವ ದ ಕೊರೊನಾ ವಾರಿಯರ್ಸ್ ಆಗಿ ಕೊರೋನಾ ವಿರುದ್ದ ಕೆಲಸ ನಿರ್ವಹಿಸುತ್ತಿರುವ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಸಂತೋಷ್ ಕುಮಾರ್ ಬೈಲೂರು, ಶಿರ್ವ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶ್ರಿ ಅನಂತಪದ್ಮನಾಭ ನಾಯಕ್, ಶಿರ್ವ ಗ್ರಾಮ ಕರಣಿಕರಾದ ಶ್ರೀ ವಿಜಯ್ ಕುಕ್ಯಾನ್ ಇವರ ಗೌರವ ಉಪಸ್ಥಿತಿಯಲ್ಲಿ ಅವರನ್ನು ನಾಗರೀಕ ಸೇವಾ ಸಮಿತಿ ಪರವಾಗಿ ಅಭಿನಂದಿಸಲಾಯಿತು.
ನಾ ಸೇ ಸಮಿತಿ ಅಧ್ಯಕ್ಷರಾದ ಕೆ.ಆರ್ ಪಾಟ್ಕರ್ ರವರು ಯೋಜನೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿ ಈ ಯೋಜನೆಯ ಯಶಸ್ವಿಗೆ ಕಾರಣಕರ್ತರಾದ ಎಲ್ಲಾ ದಾನಿಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಮಿತಿ ಕಾರ್ಯದರ್ಶೀ ಶ್ರೀ ದಿನೇಶ್ ದೇವಾಡಿಗ, ಕೋಶಾಧಿಕಾರಿ ಶ್ರೀ ಜಗದೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಶ್ರೀಮತಿ ರೋಹಿಣಿ ನಾಯಕ್ ಸಮಿತಿ ಸದಸ್ಯರು , ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಉಮೇಶ್ ಪ್ರಭು ಬಂಟಕಲ್ಲು ರಾ.ಸಾ ಯುವ ವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್, ಕಾರ್ಯದರ್ಶಿ ಆಷಿಶ್ ಪಾಟ್ಕರ್ ಹಾಗೂ ಯುವ ವೃಂದದ ಸದಸ್ಯರು, ಬಂಟಕಲ್ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಬಂಟಕಲ್ಲು ಪರಿಸರದ ನಾಗರಿಕರು ಉಪಸ್ಥಿತರಿದ್ದರು.