ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ಜಿಲ್ಲೆಯಿಂದ ಕೆಎಸ್ಆರ್‌ಟಿಸಿ ಬಸ್ಸುಗಳ ಹೆಚ್ಚಿನ ವ್ಯವಸ್ಥೆ ಸರಕಾರ ಮಾಡಬೇಕು : ಯೋಗೀಶ್ ವಿ ಶೆಟ್ಟಿ

Posted On: 20-07-2023 04:45PM

ಉಡುಪಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್ಸುಗಳು ಮಂಗಳೂರು ಮತ್ತು ಪುತ್ತೂರು ವಿಭಾಗಗಳಲ್ಲಿ ಮತ್ತು ಇತರೆಡೆ ಓಡಾಡುತ್ತಿದ್ದು, ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿರುತ್ತದೆ.

ಆದರೆ ಉಡುಪಿ ಜಿಲ್ಲೆಯಿಂದ ಕೆಲವೇ ಬಸ್ಸುಗಳು ಓಡಾಡುತ್ತಿದ್ದು ಉಡುಪಿ ಜಿಲ್ಲೆಯ ಪ್ರಯಾಣಿಕರು ಅವಕಾಶ ವಂಚಿತರಾಗಿದ್ದು, ಕೆ ಎಸ್ ಆರ್ ಟಿ ಸಿ ಬಸ್ ನಿಯಮಿತವಾಗಿ ಉಡುಪಿ ಮಂಗಳೂರು, ಮಂಗಳೂರು ಉಡುಪಿ ನೇರ ಲಿಮಿಟೆಡ್ ಸ್ಟಾಪುಗಳ ವ್ಯವಸ್ಥೆಯೊಂದಿಗೆ ಪ್ರಾರಂಭಿಸಿದರೆ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಸಾರ್ವಜನಿಕರಿಗೆ ಅತಿಯಾದ ಉಪಯೋಗವಾಗುತ್ತದೆ.

ಆದ್ದರಿಂದ ಉಡುಪಿ ಮಂಗಳೂರು, ವ್ಯವಸ್ಥೆಯನ್ನು ಉಡುಪಿ ವಲಯದಿಂದ ಕೆ ಎಸ್ ಆರ್ ಟಿ ಸಿ ನೇರ ಬಸ್ಸುಗಳ ಸಂಚಾರಗಳನ್ನು ಮತ್ತು ಇತರಡೆಗೆ ಸಂಚರಿಸುವ ವ್ಯವಸ್ಥೆ ಮಾಡುವರೆ ಸರಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದು ಉಡುಪಿ ಜಿಲ್ಲೆ ಜನತಾದಳ (ಜಾತ್ಯತೀತ) ಅಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.