ಉಡುಪಿ : ಫಲಿಸಿದ ಹೋರಾಟ ; ನಿಖಿತಾ ಕುಟುಂಬಕ್ಕೆ ಸಾಂತ್ವಾನ ಧನ
Posted On:
20-07-2023 07:35PM
ಉಡುಪಿ : ನಿಖಿತಾ ಪರ ಜರುಗಿದ ನ್ಯಾಯಯುತ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಜೋರು ಮಳೆಯನ್ನು ಲೆಕ್ಕಿಸಿದೆ ನ್ಯಾಯದ ಕೂಗನ್ನು ಎಬ್ಬಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು, ಪ್ರಜ್ಞಾವಂತ ಹೋರಾಟದ ಮನಸ್ಸುಗಳ ನಿರಂತರ ಹೋರಾಟದ ಫಲಶ್ರುತಿಯಾಗಿ ಉಡುಪಿಯ ಖಾಸಗಿ ಅಸ್ಪತ್ರೆ ನಿಖಿತಾ ಕುಟುಂಬಕ್ಕೆ ಪರಿಹಾರ ಧನವನ್ನು ನೀಡಿದೆ.
ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು ಹೋರಾಟದ ಕಾವನ್ನು ಜೀವಂತವಾಗಿ ಇರಿಸಿದವು. ಹಲವು ಮನವಿಗಳು ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಕುಲಾಲ ಸಮುದಾಯ ಸಂಘಟನೆಯ ನಾಯಕರು/ಸಾಮಾಜಿಕ ಹೋರಾಟಗಾರರು ನಿರಂತರ ಮಾತುಕಥೆಯನ್ನು ನಡೆಸಿದುದರ ಪ್ರಯತ್ನವಾಗಿ ಫಲ ದೊರೆಯಿತು. ವೈದ್ಯೊ ನಾರಾಯಣೀ ಹರಿ: ಸೇವಾ ನ್ಯೂನತೆಗಳಿರದೆ, ಗ ರಿಷ್ಠ ಪ್ರಯತ್ನಗಳ ಹೊರತಾಗಿಯೂ ನಿಖಿತಾಳನ್ನು ಉಳಿಸಿಕೊಳ್ಳಲಾಗಿಲ್ಲ ಎಂಬ ನೋವಿನಲ್ಲಿ ಮಾನವೀಯ ನೆಲೆಯಲ್ಲಿ ಇಪ್ಪತ್ತು ಲಕ್ಷ ಸಾಂತ್ವನ ಧನವನ್ನು ನಿಖಿತಾ ಕುಟುಂಬಕ್ಕೆ ಇಂದು ನೀಡಿದ ಉಡುಪಿ ಖಾಸಗಿ ಆಸ್ಪತ್ರೆಗೆ ಸಂಘಟನೆ ಕೃತಜ್ಞತೆ ಸಲ್ಲಿಸಿದೆ.
ಖಂಡಿತಾ ನಿಖಿತಾ ತಂದೆ-ತಾಯಿಗೆ ಈ ಪರಿಹಾರ ಹಣ ಮಗಳ ಸಾವಿಗೆ ಸಮಾಧಾನ ನೀಡದು. ಆದರೆ ಮಗಳಿಗಾಗಿ ಕಟ್ಟಿದ ಹೊಸಮನೆಯ ಸಾಲತೀರಿಸಲು, ಬೇರೆ ಮಕ್ಕಳಿಲ್ಲದ ಅವರ ನಾಳೆಯ ಬದುಕಿಗೆ ಪುಟ್ಟ ಆಸರೆಯಂತೂ ಖಂಡಿತಾ ಆದೀತು.
ಒಂದು ನ್ಯಾಯಪರ ಹೋರಾಟ,ಸಮುದಾಯ ಸಂಘಟನೆಗಳ ಮನವಿಗಳಿಗೆ ಸಿಕ್ಕ ಜಯ. ನಿಖಿತಾ ಪರ ದನಿಮೂಡಿಸಿದ ಎಲ್ಲ ಮಾನವೀಯ ಮನಸ್ಸುಗಳಿಗೆ, ಸಂಘಟನೆಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
"ಕಾಪುವಿನ ನಿಖಿತಾ ಕುಟುಂಬದ ನೋವಿಗೆ ಸಕಾಲದಲ್ಲಿ ಸ್ಪಂದಿಸಿದ ಎಲ್ಲರಿಗೂ ಆಭಾರಿ.
ಖಂಡಿತಾ ತೀರಿಹೋದ ಮಗಳನ್ನು ಮತ್ತೆ ನಮಗೆ ಮರಳಿಸಿಕೊಡಲು ಸಾಧ್ಯವಿಲ್ಲ. ಆದರೆ ಕನಿಷ್ಟ ನಿಖಿತಾ ತಂದೆ- ತಾಯಿಯ ಮುಂದಿನ ಜೀವನ ನಿರ್ವಹಣೆಗೆ ಈ ಹಣ ಸದ್ವಿನಿಯೋಗವಾಗಲಿ. ಕೈಜೋಡಿಸಿದ ವಿದ್ಯಾರ್ಥಿ ತಂಡಗಳಿಗೆ, ಜಿಲ್ಲಾ ಕುಲಾಲ ನಾಯಕರಿಗೆ, ಕೊನೆಗಾದರೂ ಸ್ಪಂದಿಸಿದ ಆಸ್ಪತ್ರೆಯವರಿಗೆ ನನ್ನ ಕೃತಜ್ಞತೆಗಳು."
ಉದಯ್ ಕುಲಾಲ್ ಕಳತ್ತೂರು
ನಿಕಟ ಪೂರ್ವ ಅಧ್ಯಕ್ಷರು
ಕಾಪು ಕುಲಾಲ ಯುವ ವೇದಿಕೆ