ಎರ್ಮಾಳು ಬರ್ಪಾಣಿ ಮೂಡಬೆಟ್ಟುವಿನಲ್ಲಿ ಪಿಪಿಸಿ ವಿದ್ಯಾರ್ಥಿಗಳಿಗೆ ಕಂಡಡೊಂಜಿ ದಿನ ಕಾರ್ಯಕ್ರಮ
Posted On:
22-07-2023 06:02PM
ಎರ್ಮಾಳು : ಆದರ್ಶ ಸಂಘಗಳ ಒಕ್ಕೂಟ ಅದಮಾರು, ರಾಷ್ಟ್ರೀಯ ಸೇವಾ ಯೋಜನೆ, ಪೂರ್ಣ ಪ್ರಜ್ಞಾ ಪದವಿಪೂರ್ವ ಕಾಲೇಜು ಅದಮಾರು ಇವರ ಸಂಯುಕ್ತ ಆಶ್ರಯದಲ್ಲಿ ಎರ್ಮಾಳು ಬರ್ಪಾಣಿ ಮೂಡಬೆಟ್ಟುವಿನ ಜಗನ್ನಾಥ ಶೆಟ್ಟಿಯವರ ಗದ್ದೆಯಲ್ಲಿ ಕಂಡಡೊಂಜಿ ದಿನ ಕಾರ್ಯ ಕ್ರಮ ಶನಿವಾರ ಜರಗಿತು.
ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನೆಯ ವಿಭಾಗಾಧಿಕಾರಿ ಸವಿತಾ ಎರ್ಮಾಳು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಇಂದಿನ ಕಂಡಡೊಂಜಿ ದಿನ ಕಾರ್ಯಕ್ರಮ ಇಂದಿಗೆ ಮಾತ್ರವೇ ಸೀಮಿತ ಆಗದೆ, ಎಂದಿಗೂ ಇದೊಂದು ಪ್ರೇರಣೆಯಾಗಲಿ. ತೆನೆ ಎಷ್ಟು ತುಂಬಿದ್ದರೂ, ಅದು ಬಾಗುತ್ತದೆ. ನಾವು ಕೂಡಾ ಪ್ರಕೃತಿಗೆ, ಭೂಮಿಗೆ ತಲೆ ಬಾಗಲೇಬೇಕೆಂದರು.
ಸನ್ಮಾನ : ದೈಹಿಕ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಪತ್ರಕರ್ತ ಹರೀಶ್ ಹೆಜ್ಮಾಡಿ ಮತ್ತು ಸವಿತಾ ಎರ್ಮಾಳುರವರನ್ನು ಸನ್ಮಾನಿಸಲಾಯಿತು.
ಪೂರ್ಣ ಪ್ರಜ್ಞ ಕಾಲೇಜಿನ ಕೋಶಾಧಿಕಾರಿ ಗಣೇಶ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯ ಸುಮಾರು 500 ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದರು.
ಮುಖ್ಯ ಅತಿಥಿಗಳಾಗಿ ಸವಿತಾ ಎರ್ಮಾಳು, ಉದ್ಯಮಿ ಬಾಲಚಂದ್ರ ಎಲ್.ಶೆಟ್ಟಿ, ಎರ್ಮಾಳು ನಾರಾಯಣ ಶೆಟ್ಟಿ, ಸಂತೋಷ್ ಶೆಟ್ಟಿ ಇನ್ನ, ಸಂತೋಷ್ ಶೆಟ್ಟಿ ಬರ್ಪಾಣಿ, ಡಾ. ಜಯಶಂಕರ್ ಕಂಗಣ್ಣಾರು, ಸಂಜೀವ ನಾ̧ಯ್ಕ್, ಕಾಪು ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಸಂಜೀವ ನಾಯ್ಕ್ ಸ್ವಾಗತಿಸಿದರು. ಶಿಕ್ಷಕ ದೇವಿಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿದರು. ಡಾ. ಜಯಶಂಕರ್ ಕಂಗಣ್ಣಾರು ವಂದಿಸಿದರು.