ಎರ್ಮಾಳು : ಕೆಸರ್ಡ್ ಗೊಬ್ಬು ಕ್ರೀಡಾಕೂಟ
Posted On:
23-07-2023 01:46PM
ಎರ್ಮಾಳು : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಹಾಗೂ ಬಂಟರ ಕ್ರೀಡಾ ವಿಭಾಗಧ ಆಶ್ರಯದಲ್ಲಿ ಆದಿತ್ಯವಾರ ಎರ್ಮಾಳು ಬರ್ಪಾಣಿ ಜಗನ್ನಾಥ ಶೆಟ್ಟಿಯವರ ಗದ್ದೆಯಲ್ಲಿ ಕೆಸರ್ಡ್ ಗೊಬ್ಬು ಕ್ರೀಡಾ ಕೂಟ ಜರಗಿತು.
ಮಾಜಿ ಕಸ್ಟಂಸ್ ಅಧಿಕಾರಿ, ಜಿಲ್ಲಾ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಕ್ರೀಡೆ ಪ್ರಶಸ್ತಿ ಪಡೆಯುವ ಸಲುವಾಗಿ ಮಾತ್ರವಲ್ಲದೆ, ದೇಹದ ಆರೋಗ್ಯ ಕಾಪಾಡಲು ಬಹು ಮುಖ್ಯ. ಕ್ರೀಡೆಯಲ್ಲಿ ಸಾಧನೆಯ ಮುಖಾಂತರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಸಾಧ್ಯ ಎಂದರು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅದ್ಯಕ್ಷ ರವಿ ಶೆಟ್ಟಿ, ಪುಣೆ ಉದ್ಯಮಿ ಬಾಲಚಂದ್ರ ಎಲ್. ಶೆಟ್ಟಿ ಎರ್ಮಾಳು, ಎಸ್.ಇ.ಝಡ್ ಜನರಲ್ ಮೆನೇಜರ್ ಅಶೋಕ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಉದ್ಯಮಿ ಮಿಥುನ್ ಆರ್ ಹೆಗ್ಡೆ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕಾರ್ಯದರ್ಶಿ, ಪಡುಹಿತ್ಲು ಪ್ರಕಾಶ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಸಂತೋಷ್ ಶೆಟ್ಟಿ ಬರ್ಪಾಣಿ, ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಕ್ರೀಡಾ ಸಂಚಾಲಕ ವಿನಯ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನವೀನ್ ಎನ್ ಶೆಟ್ಟಿ ಸ್ವಾಗತಿಸಿದರು.
ಪದ್ರ ಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಎಸ್. ಶೆಟ್ಟಿ ವಂದಿಸಿದರು.