ಉಡುಪಿ : ನಮ್ಮ ಮನೆ ನಮ್ಮ ಮರ ತಂಡದಿಂದ ಉಡುಪಿಯ ಬುಡ್ನಾರಿನ ಛಾಯಾನಟ್ ಮನೆಯಲ್ಲಿ ಪದ್ಮಶ್ರೀ ಪುರಸ್ಕತೆ ನಾಡೋಜ ಸಾಲುಮರದ ತಿಮ್ಮಕ್ಕ ಅವರನ್ನು ಜಯಕರ್ ಶೆಟ್ಟಿ ಇಂದ್ರಾಳಿ ಅವರು ಗೌರವಿಸಿದರು.
ಸಾಲುಮರದ ತಿಮ್ಮಕ್ಕ ನೀಡಿದ ಹಣ್ಣಿನ ಗಿಡಗಳನ್ನು ಇದೇ ಪರಿಸರದಲ್ಲಿ ನೆಡಲಾಯಿತು.
ಇದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಮಗ ಉಮೇಶ್, ವನಸಿರಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಉಪಾಧ್ಯಕ್ಷೆ ಸಂಧ್ಯಾ ಶೆಣೈ, ನಾಗರಾಜ್ ಹೆಬ್ಬಾರ್ ವಿಘ್ನೇಶ್ವರ ಅಡಿಗ, ಮಧುಸೂದನ್ ಹೇರೂರು, ಉಡುಪಿಯ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಹರೀಶ್ಚಂದ್ರ, ಡಾ. ವ್ಯಾಸರಾಯ ತಂತ್ರಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್. ಪಿ, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ನಮ್ಮ ಮನೆ ನಮ್ಮ ಮರ ತಂಡದ ಅವಿನಾಶ್ ಕಾಮತ್, ಗುರುರಾಜ್ ಸನಿಲ್, ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು , ಪ್ರೊ .ಕೃಷ್ಣಯ್ಯ, ಕಲಾವಿದರಾದ ಪುರುಷೋತ್ತಮ ಅಡ್ವೆ , ಜನಾರ್ದನ ಹಾವಂಜೆ, ಗಿರಿಜಾ ಹೆಲ್ತ್ ಕೇರ್ ಮಾಲಕ ರವೀಂದ್ರ ಕಡೆಕಾರ್ , ರಾಘವೇಂದ್ರ ಪ್ರಭು ಕರ್ವಾಲು, ರಾಘವೇಂದ್ರ ಅಜೆಕಾರು, ರಾಮಾಂಜಿ, ರೋಟರಾಕ್ಟ್ ಕ್ಲಬ್ ಉಡುಪಿ ಇದರ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.