ಕಟಪಾಡಿ : ಯುವ ಜನ ಸೇವಾ ಸಂಘ
ಏಣಗುಡ್ಡೆ ಕಟಪಾಡಿ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಉಡುಪಿ ಇದರ ಸಹಯೋಗ ದೊಂದಿಗೆ ಜುಲೈ 29 ಮತ್ತು 30 ರಂದು ಕಟಪಾಡಿಯ ಎಸ್.ವಿ.ಎಸ್ ಹೈಸ್ಕೂಲ್ ನಲ್ಲಿ ಪ್ರಥಮ ಬಾರಿಗೆ 2 ದಿನದ ಹಲಸು ಮೇಳವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಉಡುಪಿಯ ನಿರ್ದೇಶಕರಾದ ಹೇಮಂತ್ ಕುಮಾರ್, ಕಾಪು ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆದ ಶ್ರೀಶೈಲ ಮುರಗೊಡ್, ಎಸ್. ವಿ.ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇ0ದ್ರ ಪೈ, ಎಸ್.ವಿ.ಎಸ್ ಕಾಲೇಜ್ ನ ಪ್ರಾಂಶುಪಾಲರಾದ ದಯಾನಂದ್ ಪೈ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಆಚಾರ್ಯ ಹಾಗೂ ಯುವಜನ ಸೇವಾ ಸಂಘದ ಅಧ್ಯಕ್ಷರಾದ ಪ್ರಮೋದ್ ಉಪಸ್ಥಿತರಿರುವರು.
2 ದಿನ ನಡೆಯುವ ಈ ಮೇಳದಲ್ಲಿ ಪ್ರಮುಖವಾಗಿ ಕಲ್ಪ ರಸ, ಹಲಸಿನ ತಳಿಗಳಾದ ಚಂದ್ರ ಹಲಸು, ಏಕಾದಶ ಹಲಸು, ರುದ್ರಾಕ್ಷ ಹಲಸುಗಳ ಮಾರಾಟ, ಹಲಸಿನ ಹಣ್ಣಿನ ವಿವಿಧ ಖಾದ್ಯಗಳಾದ, ಹಲಸಿನ ಹೋಳಿಗೆ, ದೋಸೆ, ಬನ್ಸ್, ಗಟ್ಟಿ, ಕಡುಬು, ಪತ್ರೊಡೆ, ಹಲಸಿನ ಬೀಜದ ಹೋಳಿಗೆ, ಚಕ್ಕುಲಿ, ಹಲಸಿನ ಕಬಾಬ್, ಮಂಚೂರಿಯನ್, ಹಲಸಿನ ಹಲ್ವಾ, ಹಪ್ಪಳ, ಚಿಪ್ಸ್, ಜ್ಯುಸ್, ಹಲಸಿನ ಐಸ್ ಕ್ರೀಮ್ ಹಲಸಿನ ವಿವಿಧ ತಳಿಗಳ ಸಸಿಗಳು, ತರಕಾರಿ ಬೀಜಗಳು, ಮಳಿಗೆಗಳು ಹಾಗೂ ಸಾವಯವ ಗೊಬ್ಬರ, ಪಾಟ್ಸ್, ಸಾವಯವ ಉತ್ಪನ್ನಗಳ ಮಳಿಗೆಗಳು, ದೇಸಿ ಗೋ ಉತ್ಪನ್ನಗಳು, ಆಯುರ್ವೇದಿಕ್ ಉತ್ಪನ್ನಗಳು, ಹ್ಯಾಂಡ್ ಲೂಮ್ಸ್, ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
60 ಕ್ಕಿಂತ ಹೆಚ್ಚು ಮಳಿಗೆಗಳಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನೀರೀಕ್ಷೆ ಇದೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.