ಉಡುಪಿ ಬೀಡಿನಗುಡ್ಡೆ ಜಿಲ್ಲಾ ರಂಗ ಮಂದಿರ ರ ಆವರಣ ಗೋಡೆ ಕುಸಿದು 3 ತಿಂಗಳಾದರೂ ಇನ್ನೂ ದುರಸ್ತಿಯಾಗದ ಕಾರಣ ರಂಗಮಂದಿರ ಆವರಣದಲ್ಲಿ ಕುಡುಕರು, ಅಲೆಮಾರಿಗಳು ತನ್ನ ಆಶ್ರಯತಾಣವಾಗಿ ಮಾಡಿದ್ದರು ಈ ಬಗ್ಗೆ ವರದಿ ಗೆ ಸ್ಪಂದಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಈಗಾಗಲೇ ಈ ಕಟ್ಟಡವನ್ನು ನಗರಸಭೆಗೆ ಹಸ್ತಾoತರಿಸಲಾಗಿದೆ.ಈ ಕೂಡಲೇ ಈ ಬಗ್ಗೆ ಕಾಮಗಾರಿ ನಡೆಸುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ರೀತಿಯ ತುತು೯ ಸ್ಪಂದನೆಗೆ ಸಾವ೯ಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ