ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅಳಿವಿನಂಚಿನಲ್ಲಿರುವ ಶ್ರೀ ತಾಳೆ ಗಿಡಗಳನ್ನು ಹೆಬ್ರಿ ಪರಿಸರದಲ್ಲಿ ನೆಡುವ ಅಭಿಯಾನಕ್ಕೆ ಚಾಲನೆ

Posted On: 29-07-2023 10:06AM

ಉಡುಪಿ : ವನದೇವತೆ ಸಾಲುಮರದ ತಿಮ್ಮಕ್ಕ ಇತ್ತೀಚೆಗೆ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಪ್ರೊ. ಕೃಷ್ಣಯ್ಯನವರು ಅವರಿಗೆ ನೀಡಿದ್ದ ವಿನಾಶದ ಅಂಚಿನಲ್ಲಿರುವ 112 'ಶ್ರೀತಾಳೆ' ಗಿಡಗಳನ್ನು - ಸಾಮಾಜಿಕ ಕಾರ್ಯಕರ್ತೆ ಡಾ. ಭಾರ್ಗವಿ ಐತಾಳರಿಗೆ ಉಡುಪಿ ಜಿಲ್ಲೆಯ ಹೆಬ್ರಿ ಸುತ್ತಮುತ್ತಲಿನ ಪರಿಸರದಲ್ಲಿ ನೆಡಲು ನಮ್ಮ ಮನೆ ನಮ್ಮ ಮರ ತಂಡದ ರವಿರಾಜ್ ಎಚ್ ಪಿ ಅವರು ಹಸ್ತಾಂತರಿಸಿದರು.

ಈ 112 ಗಿಡಗಳನ್ನು ಪ್ರೊ. ಕೃಷ್ಣಯ್ಯ ಅವರು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ 112 ವರ್ಷ ತುಂಬಿರುವ ಗೌರವದ ಸಂಕೇತವಾಗಿ ಉಡುಪಿಯಲ್ಲಿ 'ನಮ್ಮ ಮನೆ ನಮ್ಮ ಮರ ತಂಡ'ದ ಮೂಲಕ ನೀಡಿದ್ದರು.

ವೃಕ್ಷಮಾತೆ ಈ ಗಿಡಗಳನ್ನು ತಮ್ಮ ಅಮೃತ ಹಸ್ತದಿಂದ ಮುಟ್ಟಿ ಉಡುಪಿ ಜಿಲ್ಲೆಯ ಪರಿಸರದಲ್ಲಿ ಬೆಳೆಸಲು ತಿಳಿಸಿದ್ದರು.

ಇದೇ ಸಂದರ್ಭದಲ್ಲಿ ಹೆಬ್ರಿ ರಾಘವೇಂದ್ರ ನರ್ಸಿಂಗ್ ಹೋಮ್ನ ಮುಖ್ಯಸ್ಥರಾದ ಡಾ. ರಾಮಚಂದ್ರ ಐತಾಳ್ , ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.