ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೆಳ್ಮಣ್ : ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಿದ ಕ್ರಿಯಾಶೀಲಾ ಯುವಕನಿಗೆ ಗೌರವಾರ್ಪಣೆ.

Posted On: 29-07-2023 10:16AM

ಬೆಳ್ಮಣ್ : ಸುಮಾರು ವರ್ಷಗಳಿಂದ ತನ್ನ ಪರಿಸರದ ಹಡಿಲು ಬಿದ್ದ ಕೃಷಿ ಭೂಮಿಯನ್ನು ಪುನಶ್ಚೇತನ ಗೊಳಿಸಿ ಬೇಸಾಯ ಮಾಡಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಅಂತರಾಷ್ಟ್ರೀಯ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿರುವ ಕ್ರಿಯಾಶೀಲ ಯುವಕ ಸುಬಾಸ್ ಕುಮಾರ್ ನಂದಳಿಕೆ ಇವರನ್ನು ಲಯನ್ಸ್ ಕ್ಲಬ್ಬಿನ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿಮಾಜಿ ಜಿಲ್ಲಾ ಲಯನ್ಸ್ ಗವರ್ನರ್ ಎನ್ ಎಂ ಹೆಗಡೆ ಮಾತನಾಡಿ ಯುವಕರು ಕೃಷಿಯಲ್ಲಿ ತೊಡಗಿಗೊಂಡಾಗ ಕೃಷಿಯಲ್ಲಿ ಪ್ರಗತಿ ಕಂಡು ಕೊಳ್ಳಲು ಸಾಧ್ಯ. ಸಂಘ ಸಂಸ್ಥೆಗಳು ಯುವಕೃಷಿಕರನ್ನು ಗೌರವಿಸಬೇಕು. ಇನ್ನು ಹೆಚ್ಚಿನ ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಕೃಷಿಯಲ್ಲಿ ಪ್ರಗತಿ ಕಂಡು ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ವಿಶ್ವನಾಥ್ ಪಾಟ್ಕರ್ ವಹಿಸಿದ್ದು ನಿವೃತ್ತ ಪ್ರಾಂಶುಪಾಲರು ಮತ್ತು ಜೆ ಸಿ ಚಾರ್ಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷರಾಗಿರುವ ಜಯಂತ್ ರಾವ್ ಪಿಲಾರ್, ಲಕ್ಷ್ಮಿ ಜನಾರ್ಧನ ದೇವಸ್ಥಾನದ ಆಡಳಿತ ಮುಖ್ಯಸ್ಥರು ಆಗಿರುವ ತುಕಾರಾಂ ಶೆಟ್ಟ, ರಾಮನಾಥ ಶೆಣೈ, ಸರೋಜಿನಿ ಶೆಟ್ಟಿ, ಸೆಂಚುರಿ ಕ್ಲಬ್ಬಿನ ಅಧ್ಯಕ್ಷರಾಗಿರುವ ಸುಜನ್ ಕ್ಯಾಸ್ಟಿಲಿನೋ ಮತ್ತು ಲಿಯೋ ಕ್ಲಬ್ಬಿನ ಅಲನ್ಸ್ ಕ್ಯಾಸ್ಟಿಲನೋ ಮತ್ತಿತರರು ಉಪಸ್ಥಿತರಿದ್ದರು.