ಕಾಪು : ಮಣಿಪುರ ರಾಜ್ಯದಲ್ಲಿ ಕಳೆದ ಸುಮಾರು 3 ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರ, ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಸಭೆಯು ಜುಲೈ 29ರಂದು ಕಾಪು ಪೇಟೆಯಲ್ಲಿ ನಡೆಯಿತು.
ಪ್ರತಿಭಟನಾ ಮೆರವಣಿಗೆಯು ಕಾಪು ರಾಜೀವ್ ಭವನದಿಂದ ಕಾಪು ಪೇಟೆಯವರೆಗೆ ಸಾಗಿ, ಪೇಟೆಯಲ್ಲಿ ಸಭೆ ನಡೆಯಿತು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸಭೆಯನ್ನುದ್ದೇಶಿಸಿ ಮಾತನಾಡಿ,
ಕೇಂದ್ರದ ಬಿಜೆಪಿ ಸರ್ಕಾರ ಕುಮ್ಮಕ್ಕು ನೀಡಿ ಮಣಿಪುರದಲ್ಲಿ ಬುಡಕಟ್ಟು ಜನಾಂಗದ ಮೇಲೆ ಹಲ್ಲೆಮಾಡುತ್ತಿದೆ. ಮಣಿಪುರ ರಾಜ್ಯದ ಎಲ್ಲೆಡೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾಂಗ್ರೆಸ್ ಇಡೀ ದೇಶದಲ್ಲೇ ಪ್ರತಿಭಟನೆ ಮಾಡುತ್ತಿದೆ. ಬೇಟಿ ಪಡಾವೋ ಬೇಟಿ ಬಚಾವೊ ಎನ್ನುವ ಬಿಜೆಪಿ ಸರ್ಕಾರ ಇಂದು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡುತ್ತಿದೆ. ಆದರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಮಣಿಪುರದ ಮುಖ್ಯಮಂತ್ರಿ ಯನ್ನು ವಜಾಮಾಡಿ ರಾಷ್ಟ್ರಪತಿ ಆಡಳಿತ ತರಲಿ ಎಂದು ಒತ್ತಾಯ ಮಾಡುತ್ತೇವೆ ಎಂದರು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಎಂ ಎ ಗಫೂರ್, ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ನವೀನ್ ಚಂದ್ರ ಜೆ ಶೆಟ್ಟಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್, ಶೇಖರ ಹೆಜ್ಮಾಡಿ, ಅಬ್ದುಲ್ ಅಜೀಜ್, ಹರೀಶ್ ನಾಯಕ್, ಸುನೀಲ್ ಬಂಗೇರ, ಶಿವಾಜಿ ಸುವರ್ಣ, ಶರ್ಫುದ್ದೀನ್ ಶೇಖ್, ಗಣೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.