ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ : ಹಲಸು ಮೇಳ - 2023 ಉದ್ಘಾಟನೆ

Posted On: 29-07-2023 02:03PM

ಕಟಪಾಡಿ : ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಜುಲೈ 29 ರಂದು ಎಸ್.ವಿ.ಎಸ್ ಹೈಸ್ಕೂಲ್, ಕಟಪಾಡಿ ಇಲ್ಲಿ ಆಯೋಜಿಸಿದ ಹಲಸು ಮೇಳ - 2023 ಇದರ ಉದ್ಘಾಟನೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ತೋಟಗಾರಿಕಾ ಮತ್ತು ಕೃಷಿ ಇಲಾಖೆಯ ನಿರ್ದೇಶಕರಾದ ಹೇಮಂತ್, ನಿವೃತ್ತ ಕುಲಪತಿಗಳಾದ ಎಂ.ಕೆ ನಾಯಕ್, ಕಾಪು ಪೋಲಿಸ್ ಉಪ ನಿರೀಕ್ಷಕರಾದ ಶ್ರೀಶೈಲ, ಕಟಪಾಡಿ ಎಸ್.ವಿ.ಎಸ್ ವಿಧ್ಯಾವರ್ಧಕ ಸಂಚಾಲಕರಾದ ಸತ್ಯೇಂದ್ರ ಪೈ, ಕಟಪಾಡಿ ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಪೈ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಆಚಾರ್ಯ, ಏಣಗುಡ್ಡೆ ಕಟಪಾಡಿ ಯುವಜನ ಸೇವಾ ಸಂಘದ ಅಧ್ಯಕ್ಷರಾದ ಪ್ರಮೋದ್ ಉಪಸ್ಥಿತರಿದ್ದರು.