ಜೆಸಿಐ ಕಟಪಾಡಿ ರೀಜನ್ ಎ ಝೋನ್ xv ಮತ್ತು ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಕ್ಕಳ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ. ಮನೆಯಲ್ಲಿಯೇ ರಚಿಸಿ ಕಳುಹಿಸಿದ ಉತ್ತಮ ಚಿತ್ರಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಟ್ರೋಫಿ, ಪ್ರಮಾಣಪತ್ರವಿದ್ದು, ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ನೀಡಲಾಗುವುದು. ಬಹುಮಾನವನ್ನು ಆಗಸ್ಟ್ 15 ರಂದು ಕಟಪಾಡಿ ಪಳ್ಳಿಗುಡ್ಡೆ ಜೆಸಿ ಭವನದಲ್ಲಿ ವಿತರಿಸಲಾಗುವುದು.
ಕಿರಿಯ ಪ್ರಾಥಮಿಕ ವಿಭಾಗ (LKG-UKG-1std) ನಮ್ಮ ರಾಷ್ಟ್ರ ಧ್ವಜ, ಪ್ರಾಥಮಿಕ ವಿಭಾಗ (2-3-4std) ಧ್ವಜಾರೋಹಣ ಸಮಾರಂಭ. ಹಿರಿಯ ಪ್ರಾಥಮಿಕ ವಿಭಾಗ (5-6-7std) ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಹೈಸ್ಕೂಲ್ ವಿಭಾಗ (8-9-10std) ಸೇವ್ ಅವರ್ ನೇಶನ್- ಸ್ಟಾಪ್ ಚೈನ ಮೆಟೀರಿಯಲ್ಸ್ ಅಥವಾ ಮೈ ನೇಶನ್ ಮೈ ಆರ್ಮಿ.
ಆಗಸ್ಟ್ 12 ರೊಳಗೆ ಮಕ್ಕಳ ಹೆಸರು, ತರಗತಿ, ಶಾಲೆಯ ಹೆಸರು, ಮನೆಯ ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಚಿತ್ರವನ್ನು ಕೆ. ನಾಗೇಶ್ ಕಾಮತ್, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್, ದೇವ ಸುಮ, ಚಿಲ್ಮಿ ಮನೆ, ಕಟಪಾಡಿ-574105 ವಿಳಾಸಕ್ಕೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜೆಸಿ ದಿನೇಶ್ ಎಸ್. ಜೆ : 9448623400
ಕೆ.ನಾಗೇಶ್ ಕಾಮತ್ : 9886432197