ಕಟಪಾಡಿ : ಎಸ್.ವಿ.ಎಸ್ ಹೈಸ್ಕೂಲ್ ಕಟಪಾಡಿಯ ಹಳೆವಿದ್ಯಾರ್ಥಿ ಸಂಘದ ಅಮೃತ ಮಹೋತ್ಸವದ ಪ್ರಯುಕ್ತ ಎಸ್.ವಿ.ಎಸ್ ಹೈಸ್ಕೂಲ್ ನ ವಿದ್ಯಾರ್ಥಿಗಳಿಗೆ ಸುಮಾರು 70000 ರೂ. ಮೌಲ್ಯದ ಸಮವಸ್ತ್ರ ಹಾಗೂ ಶಾಲಾ ಶುಲ್ಕವನ್ನು ಸಂಘದ ಅಧ್ಯಕ್ಷರಾದ ಪ್ರೇಮ್ ಕುಮಾರ್ ಮುಂದಾಳುತ್ವದಲ್ಲಿ ಎಸ್.ವಿ.ಎಸ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೀಡಲಾಯಿತು.
ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಆಡಳಿತಮಂಡಳಿಯ ಸತ್ಯೇಂದ್ರ ಪೈ, ನಿತ್ಯಾನಂದ ಶೆಣೈ, ವೆಂಕಟರಮಣ ಭಟ್,ಗಣೇಶ್ ಕಿಣಿ, ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ತಂತ್ರಿ ಹಾಗೂ ಉಪಾಧ್ಯಾಯರು, ಹಳೆ ವಿದ್ಯಾರ್ಥಿಗಳಾದ ಪಂಚಾಯತ್ ಉಪಾಧ್ಯಕ್ಷರಾದ ಪ್ರಭಾ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ರಾವ್, ಖಜಾಂಚಿ ಮಹೇಶ್ ಅಂಚನ್, ಜಯಶ್ರೀ, ಶಶಿಕಲಾ, ಪ್ರದೀಪ್, ಸತೀಶ್ ಕುಮಾರ್ ಕೇದಾರ್ ಸುಕುಮಾರ್, ಸಂತೋಷ್.ಎನ್.ಎಸ್ ಕಟಪಾಡಿ, ಬಿ. ಬಿ. ಸಾಫುರಾ ಉದ್ಯಾವರ ಉಪಸ್ಥಿತರಿದ್ದರು.