ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಂಪನ್ನ

Posted On: 06-08-2023 02:42PM

ಪಡುಬಿದ್ರಿ : ಜೆಸಿಐ ಪಡುಬಿದ್ರಿ, ಹಠಯೋಗ ಶಿಕ್ಷಣ ಸಮಿತಿ ಪಡುಬಿದ್ರಿ, ಶ್ರೀ ಸುಬ್ರಹ್ಮಣ್ಯ ಯುವಕ ಯುವತಿ ವೃಂದ, ಪಾದೆಬೆಟ್ಟು, ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ವಲಯದ ಎಲ್ಲಾ ಕ್ರಿಕೆಟ್ ತಂಡಗಳು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ, ಪಡುಬಿದ್ರಿ ಘಟಸಮಿತಿ, ಉಡುಪಿ ಬೆಳ್ಮಣ್ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ರವಿವಾರ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಲ್ಲಿ ಜರಗಿತು.

ಕಾರ್ಯಕ್ರಮವನ್ನು ಪಡುಬಿದ್ರಿ ದುರ್ಗಾ ಕ್ಲಿನಿಕ್ ವೈದ್ಯೆ ಡಾ| ಪಯಸ್ವಿನಿ ಶೆಟ್ಟಿಗಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಜೆಸಿಐ ಅಧ್ಯಕ್ಷರಾದ ಯಶೋದ ವಹಿಸಿದ್ದರು.

ಕಾರ್ಯಕ್ರಮಲ್ಲಿ ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ, ಪಾದಬೆಟ್ಟು, ಕೆ.ಪಿ.ಎಸ್ ಪಡುಬಿದ್ರಿ ಮುಖ್ಯ ಶಿಕ್ಷಕ ಕೃಷ್ಣಯ್ಯ, ಶ್ರೀ ಸುಬ್ರಹ್ಮಣ್ಯ ಯುವಕ ಯುವತಿ ವೃಂದ ಪಾದೆಬೆಟ್ಟು ಅಧ್ಯಕ್ಷರಾದ ಪ್ರಕಾಶ್ ‌ಶೆಟ್ಟಿ ಪಾದೆಬೆಟ್ಟು, ಶ್ರೀ ಸುಬ್ರಹ್ಮಣ್ಯ ಯುವತಿ ವೃಂದ ಪಾದೆಬೆಟ್ಟು ಅಧ್ಯಕ್ಷೆ ಗೀತಾ ಪ್ರಭಾಕರ್, ಹಠಯೋಗ ಶಿಕ್ಷಣ ಸಮಿತಿ ಪಡುಬಿದ್ರಿ ಅಧ್ಯಕ್ಷ ಡಾ| ಮನೋಜ್ ಶೆಟ್ಟಿ, ರೋಟರಿ ಕ್ಲಬ್, ಪಡುಬಿದ್ರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಉಡುಪಿ ಜಿಲ್ಲಾ ಟೆನ್ನಿಸ್‌ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಗೌರವಾಧ್ಯಕ್ಷ ಶರತ್ ಶೆಟ್ಟಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಡುಬಿದ್ರಿ ಅಧ್ಯಕ್ಷೆ ಪುಷ್ಪಲತಾ ಗಂಗಾಧರ್, ಜೆಸಿಐ ರಾಷ್ಟ್ರೀಯ ಆಡಳಿತ ಸದಸ್ಯ ವೈ ಸುಕುಮಾರ್, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ ಜೆಸಿಐ ಅಧ್ಯಕ್ಷರಾದ ಯಶೋದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ವಂದಿಸಿದರು. ರಕ್ತದಾನ ಶಿಬಿರದಲ್ಲಿ 56 ಮಂದಿ ರಕ್ತದಾನ ಮಾಡಿದರು.