ಕಾಪು : ಬಡವರ ಹಿತದೃಷ್ಟಿಯ ಕಾನೂನು ನಾವು ಆರಿಸಿ ಕಳಿಸಿದ ಪ್ರಜಾ ಪ್ರತಿನಿಧಿಗಳ ಪ್ರಯತ್ನದಿಂದ ಆಗಬೇಕಿದೆ - ಕೆ. ಮಹಾಂತೇಶ
Posted On:
06-08-2023 03:01PM
ಕಾಪು : ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದಿಂದ 19ನೇ ವಾರ್ಷಿಕ ಮಹಾಸಭೆ ಕಾಪುವಿನ K1 ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಜರಗಿತು.
ಕಾರ್ಯಕ್ರಮನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ 45 ಲಕ್ಷ ಮಂದಿ ನೋಂದಾಯಿತರಾಗಿದ್ದಾರೆ. ಆದರೆ ನಿಜವಾದ ನಿರ್ಮಾಣ ವಲಯದ ಕಾರ್ಮಿಕರ ನೋಂದಾಯಿತವಾಗಿಲ್ಲ. ಸ್ವಾತಂತ್ರ್ಯಬಂದ ಮೇಲೆ ಅಂದರೆ 1996 ರಲ್ಲಿ ಕಾರ್ಮಿಕರಿಗಾಗಿ ಕಾನೂನು ಬಂತು. 2007 ಕರ್ನಾಟಕದಲ್ಲಿ ಜಾರಿಯಾಯಿತು.
ಬಡವರ ಹಿತದೃಷ್ಟಿಯ ಕಾನೂನು ಜಾರಿಯಾಗುವುದು ಬೀದಿಯಲ್ಲಿ ಮಾತನಾಡಿ ಅಲ್ಲ ನಾವು ಆರಿಸಿ ಕಳಿಸಿದ ಪ್ರಜಾ ಪ್ರತಿನಿಧಿಗಳ ಪ್ರಯತ್ನದಿಂದಾಗಬೇಕಾಗಿದೆ. ಅವರು ಕಾರ್ಮಿಕರ ಪರ ಮಾತನಾಡಬೇಕಾಗಿದೆ. ಕೇಂದ್ರ ಸರಕಾರ ಕಾರ್ಮಿಕರ ಬಗೆಗಿನ ಕೆಲವು ಯೋಜನೆಗಳನ್ನು ರದ್ದು ಮಾಡಲೆತ್ನಿಸಿದೆ. ಸರಕಾರಗಳು ಶ್ರೀಮಂತರ ಪರವಾಗಿದೆ. ಬಡವರಿಗೆ ತೊಂದರೆಯಾಗಿದೆ. ಎಲ್ಲಾ ಕಾರ್ಮಿಕರ ಸಂಘಗಳ ಸಂಘಟಿತ ಪ್ರಯತ್ನದಿಂದ ಕಾನೂನನ್ನು ರದ್ದು ಮಾಡಲು ಬಿಡಲಿಲ್ಲ.
ಕಟ್ಟಡ ಕಾರ್ಮಿಕರ ಬಗೆಗೆ ಚರ್ಚೆ ಉಡುಪಿ ದಕ್ಷಿಣಕನ್ನಡದಲ್ಲಿ ಆಗುತ್ತಿಲ್ಲ. ಬದಲಾಗಿಲ್ಲ ವಿಡಿಯೋ, ಹಿಜಾಬ್ ಇತ್ಯಾದಿಗಳ ಬಗ್ಗೆ ಆಗುತ್ತಿದೆ.
ದುಡಿಯೋ ಜನರು ಜಾತಿ ಧರ್ಮದ ಹೆಸರಿನಲ್ಲಿ ಇರಬಾರದು. ಇಲ್ಲಿ ಎಲ್ಲರೂ ಒಂದೇ. ಕಟ್ಟಡ ಕಾರ್ಮಿಕರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಶೇಖರ ಬಂಗೇರ ವಹಿಸಿದ್ದರು.
ಈ ಸಂದರ್ಭ ಸಿ.ಐ.ಟಿ.ಯು. ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾ| ಸುರೇಶ ಕಲ್ಲಾಗರ, ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಖಜಾಂಜಿ
ಕಾ| ರೊನಾಲ್ಡ್ ರಾಜೇಶ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷರಾದ ದಯಾನಂದ ಕೋಟ್ಯಾನ್, ಉಪಾಧ್ಯಕ್ಷರಾದ ಉದಯ್ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಗಣೇಶ ನಾಯಕ್, ಕಾಪು ಘಟಕದ ಅಧ್ಯಕ್ಷ ರಾಮ ಸಾಲ್ಯಾನ್, ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್, ಸಾಲಿಗ್ರಾಮ ಶಶಿಕಲ, ಶಶಿಧರ್,
ಮತ್ತಿತರರು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಜನತೆಯ ಸೌಹಾರ್ದತೆ - ಕಟ್ಟಡ ಕಾರ್ಮಿಕರ ಒಗ್ಗಟ್ಟಿಗಾಗಿ, ಕಲ್ಯಾಣ ಮಂಡಳಿ ಬಲ ಪಡಿಸಲು ಒತ್ತಾಯಿಸಿ ಸಿ ಐ ಟಿ ಯು ಬೆಂಬಲದೊಂದಿಗೆ ಕಾಪು ಸರಕಾರಿ ಆಸ್ಪತ್ರೆಯ ಬಳಿಯಿಂದ K1 ಹೋಟೆಲ್ ವರೆಗೆ ಮೆರವಣಿಗೆ ನಡೆಯಿತು.