ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಮುಂಬೈ ಮಹಾನಗರಪಾಲಿಕೆ ಸಹ ಆಯುಕ್ತರಿಂದ ಹೊಸ ಮಾರಿಗುಡಿಗೆ ಶಿಲಾ ಸೇವೆ ಸಮರ್ಪಣೆ

Posted On: 07-08-2023 06:34PM

ಕಾಪು : ಇಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮುಂಬೈ ಮಹಾನಗರಪಾಲಿಕೆ ಸಹ-ಆಯುಕ್ತರಾದ ಪಾರ್ಥ್ ಭಾಗ್ಯಶ್ರೀ ಕಪ್ಸೆ "ಕೌಸ್ತುಬ್ ಪ್ಲಾಟಿನಂ" ಬೋರಿವಿಲಿ, ಮುಂಬೈ ಆಗಮಿಸಿ 9 ಶಿಲಾಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಿಸಿ ದೇವಳದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅವರು ನಾವು ಕ್ಷೇತ್ರಕ್ಕೆ ಬಂದಿರುವುದು ನಮ್ಮ ಪುಣ್ಯ. ಸೇವೆ ನೀಡುತ್ತಿರುವುದು ನಮ್ಮ ಭಾಗ್ಯ ಹಾಗಾಗಿ ಇನ್ನು ಹೆಚ್ಚಿನ ಶಿಲಾಸೇವೆಯನ್ನು ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿ ಉಪಸ್ಥಿತರಿದ್ದರು.