ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎರ್ಮಾಳು : ಕುದ್ರೊಟ್ಟು ಬ್ರಹ್ಮ ಬೈದರ್ಕಳ ಗರಡಿ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

Posted On: 07-08-2023 06:44PM

ಎರ್ಮಾಳು : ಶ್ರೀ ಕುದ್ರೊಟ್ಟು ಬ್ರಹ್ಮ ಬೈದರ್ಕಳ ಗರಡಿಯ ಕೋಟಿ ಚೆನ್ನಯ ಯುವ ಬಳಗ ಹಾಗೂ ಬೈದಶ್ರೀ ಮಹಿಳಾ ಮಂಡಳಿಯ ಆಯೋಜನೆಯಲ್ಲಿ ಎರ್ಮಾಳು ಬಾಕ್ಯಾರು ಗದ್ದೆಯಲ್ಲಿ ಕೆಸರ್ಡ್‌ ಒಂಜಿ ದಿನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರು ಹಾಗೂ ಗರಡಿಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉದ್ಘಾಟಿಸಿದರು.

ಗರಡಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಅಂಚನ್ ಮಾತನಾಡಿ, ಪ್ರಥಮ ಬಾರಿಗೆ ನಾವು ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಗ್ರಾಮದ ಎಲ್ಲಾ ಯುವ ಪೀಳಿಗೆಗೆ ಕೆಸರಿನ ಗದ್ದೆ ಹಾಗೂ ಕೃಷಿಯ ಬಗ್ಗೆ ತಿಳಿಸಿ ಕೊಡುವ ಉದ್ದೇಶವಾಗಿದೆ ಎಂದರು.

ಕೋಟಿ ಚೆನ್ನಯ ಯುವ ಬಳಗದ ಅಧ್ಯಕ್ಷ ಕೃಷ್ಣ ಕುಮಾರ್‌ ಪೊಲ್ಯ, ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಮಮತಾ ಪೂಜಾರಿ, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭ ವಾಲಿಬಾಲ್, ಹಗ್ಗ ಜಗ್ಗಾಟ, ಒಂದು ಕಾಲು ಓಟ, ಹುಲಿ ಕುಣಿತ ಸಹಿತ ಹತ್ತು ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. 500 ಕ್ಕೂ ಅಧಿಕ ಪುರುಷ, ಮಹಿಳೆ ಹಾಗೂ ಮಕ್ಕಳು ಭಾಗವಹಿಸಿದ್ದರು.