ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಆಗಸ್ಟ್ 27 ರಂದು ಪೊಲಿಪುವಿನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Posted On: 07-08-2023 10:53PM

ಕಾಪು : ಶತ ವಜ್ರ ಸ್ವರ್ಣ ಸಂಭ್ರಮ ಸಮಿತಿ ಪೊಲಿಪು, ಮುಂಬೈ, ಗುರ್ಮೆ ಫೌಂಡೇಶನ್, ಗುರ್ಮೆ ಕಳತ್ತೂರು ಇವರ ಆಶ್ರಯದಲ್ಲಿ, ಪೊಲಿಪು ಮೊಗವೀರ ಮಹಾಸಭೆ, ಪೊಲಿಪು, ಮುಂಬೈ, ಪೊಲಿಪು ಹಳೆ ವಿದ್ಯಾರ್ಥಿ ಸಂಘ, ಪೊಲಿಪು, ಮುಂಬೈ, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಪೊಲಿಪು ಇವರ ಸಹಭಾಗಿತ್ವದೊಂದಿಗೆ ಶ್ರೀನಿವಾಸ ವೈದ್ಯಕೀಯ ಕಾಲೇಜು, ಮುಕ್ಕ, ಸುರತ್ಕಲ್, ಮಂಗಳೂರು ಇವರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಗಸ್ಟ್ 27, ಆದಿತ್ಯವಾರ ಬೆಳಗ್ಗೆ ಗಂಟೆ 9ರಿಂದ ಸ.ಹಿ.ಪ್ರಾ.ಶಾಲೆ, ಪೊಲಿಪು ಇಲ್ಲಿ ಜರಗಲಿದೆ.

ಆಸುಪಾಸಿನ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 78293 58105, 95353 68155