ಉಚ್ಚಿಲ ರೋಟರಿ ಕ್ಲಬ್ : 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ
Posted On:
13-08-2023 03:25PM
ಉಚ್ಚಿಲ : ಇಲ್ಲಿನ ರೋಟರಿ ಕ್ಲಬ್ ನ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಉಚ್ಚಿಲದ ರಾಧ ಹೋಟೆಲ್ ಸಭಾಂಗಣದಲ್ಲಿ ಜರಗಿತು.
ಝೋನ್ 5 ರ ಮಾಜಿ ಗವರ್ನರ್ ಡಾ| ಶಶಿಕಾಂತ ಕಾರಿಂಕ ರೋಟರಿ ಉಚ್ಚಿಲದ ನೂತನ ನಿಯೋಜಿತ ಅಧ್ಯಕ್ಷರಾದ ಶೇಖಬ್ಬ ಯು ಸಿ ಮತ್ತು ನಿಯೋಜಿತ ಕಾರ್ಯದರ್ಶಿ ಅಚ್ಯುತ ಶೆಣೈಯವರಿಗೆ ಪದಪ್ರದಾನಿಸಿದರು. ಈ ಸಂದರ್ಭ ಮಾತನಾಡಿದ ಅವರು ರೋಟರಿ ಸಾಮಾಜಿಕ ಹಿತದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲ್ಲಿ ಯಾವುದೇ ಬೇಧಭಾವವಿಲ್ಲ. ಮುಂದಿನ ನೂತನ ತಂಡಕ್ಕೆ ಶುಭಹಾರೈಸಿದರು.
ರೋಟರಿ ಉಚ್ಚಿಲದ ಪ್ರೇರಣ ಗೃಹ ಪತ್ರಿಕೆಯನ್ನು ಝೋನ್ 5ರ ಅಸಿಸ್ಟೆಂಟ್ ಗವರ್ನರ್ ಶೈಲೇಂದ್ರ ರಾವ್ ಕೆ. ಬಿಡುಗಡೆಗೊಳಿಸಿದರು.
ಈ ಸಂದರ್ಭ ಉಚ್ಚಿಲ ವ್ಯಾಪ್ತಿಯ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ನೂತನ ಸದಸ್ಯರನ್ನು ಕ್ಲಬ್ ಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಝೋನ್ 5 ರ ಝೋನಲ್ ಲೆಫ್ಟಿನೆಂಟ್ ಚಂದ್ರ ಪೂಜಾರಿ, ರೋಟರಿ ಉಚ್ಚಿಲದ ಅಧ್ಯಕ್ಷರಾದ ಸತೀಶ್ ಕುಲಾಲ್, ಕಾರ್ಯದರ್ಶಿ ಸುಜಿತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.