ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಾಳೆ : ನಾನಿಲ್ತಾರು ಅಭಿಮಾನಿ ಬಳಗ ಮುಂಬೈ - 15ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Posted On: 14-08-2023 08:53PM

ಕಾರ್ಕಳ : ಇಲ್ಲಿನ ನಾನಿಲ್ತಾರು ಅಭಿಮಾನಿ ಬಳಗ ಮುಂಬಯಿ( ಮುಂಡ್ಕೂರು) ಇವರ ವತಿಯಿಂದ 15 ನೇ ವರ್ಷದ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮೀ ಪೂಜೆ ನಾಳೆ (ಆಗಸ್ಟ್ 15) ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1 ರವರೆಗೆ ವಿವಿಧ ಕಾರ್ಯಕ್ರಮದೊಂದಿಗೆ ಮುಂಬೈ ಜೋಗೆಶ್ವರಿ ರೈಲ್ವೆ ನಿಲ್ದಾಣದ ಬಳಿಯ ಮಾಂಗಲ್ಯ ಮಂಗಳ್ ಕಾರ್ಯಾಲಯದಲ್ಲಿ ನಡೆಯಲಿದೆ. ಮುಂಬೈ ಭಾಗದವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.