ಶಿರ್ವ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿರ್ವ ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆಯು ಆಗಸ್ಟ್ 13ರಂದು ಶಿರ್ವ ಸಿದ್ಧಿವಿನಾಯಕ ದೇವಸ್ಥಾನದಿಂದ ಆರಂಭಗೊಂಡು ಶಿರ್ವಪೇಟೆವರೆಗೆ ಸಾಗಿ ಬಂತು.
ನಂತರ ಶಿರ್ವ ಗಣೇಶೋತ್ಸವ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪ್ರಾಸ್ತಾವಿಕ ನುಡಿಗಳನ್ನು ಜಿಲ್ಲಾ ಸೇವಾಪ್ರಮುಖ್ ರಾದ ವಿಖ್ಯಾತ ಭಟ್ ಮಾಡಿದರು.
ದಿಕ್ಸೂಚಿ ಭಾಷಣವನ್ನು ಬಜರಂಗದಳ ರಾಜ್ಯಸಂಚಾಲಕರಾದ ಸುನಿಲ್ ಕೆ ಆರ್ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ವಿ. ಹಿಂ. ಪ. ತಾಲೂಕು ಅಧ್ಯಕ್ಷ ಜಯಪ್ರಕಾಶ್ ಪ್ರಭು, ತಾಲೂಕು ಕಾರ್ಯದರ್ಶಿ ರಾಜೇಂದ್ರ ಶೆಣೈ, ಸಹ ಸಂಚಾಲಕ್ ಆನಂದ ಶಿರ್ವ, ತಾಲೂಕು ದುರ್ಗಾವಾಹಿನಿ ಪ್ರಮುಖ್ ನಿಕ್ಷಿತಾ , ಪ್ರಕಾಶ್ ಕೋಟ್ಯಾನ್ ವಲಯ ಅಧ್ಯಕ್ಷರು, ಕಾರ್ಯದರ್ಶಿ ನೀರಜ್, ಸಂಚಾಲಕ್ ವಿಶ್ವನಾಥ್, ಸಂಘದ ಹಿರಿಯರು , ಶ್ರೀಕಾಂತ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ,ಶಿ ಲ್ಪಾಸುವರ್ಣ, ರವೀಂದ್ರ ಪಾಟ್ಕರ್, ಪ್ರಸಾದ್ ಕುತ್ಯಾರ್, ಭಾಜಪದ ಪ್ರಮುಖರು ಉಪಸ್ಥಿತರಿದ್ದರು.