ಶಿರ್ವ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ರೋಟರಿ ಸಭಾಭವನದಲ್ಲಿ 77 ನೆಯ ಸ್ವಾತಂತ್ರ್ಯ ದಿನಾಚರಣೆಯು ಜರಗಿತು.
ಕ್ಲಬ್ಬಿನ ಅಧ್ಯಕ್ಷರಾದ ಫಾರೂಕ್ ಚಂದ್ರನಗರ ಧ್ವಜಾರೋಹಣಗೈದರು.
ಈ ಸಂದರ್ಭ ಶಿರ್ವ ರೋಟರಿಯ ಮಾಜಿ ಅಧ್ಯಕ್ಷ, ಮಾಜಿ ಸಹಾಯಕ ಗವರ್ನರ್, ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ನಿವೃತ್ತ ಸೇನಾನಿ ಹೆರಾಲ್ಡ್ ಕುಟಿನ್ಹ, ಶಿರ್ವ ರೋಟರಾಕ್ಟ್ ಅಧ್ಯಕ್ಷ ಗೊಡ್ವಿನ್ ಮೋನಿಸ್, ಮಾಜಿ ಸಹಾಯಕ ಗವರ್ನರ್ ಪುಂಡಲೀಕ ಮರಾಠೆ, ಮಾಜಿ ಅಧ್ಯಕ್ಷ, ಮಾಜಿ ಸಹಾಯಕ ಗವರ್ನರ್ ಡಾ.ಅರುಣ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ಡಾ.ವಿಠಲ್ ನಾಯಕ್, ಮಾಜಿ ಅಧ್ಯಕ್ಷ, ರಘುಪತಿ ಐತಾಳ್, ಮಾಜಿ ಅಧ್ಯಕ್ಷ ಲೂಕಸ್ ಡಿಸೋಜ, ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿ ವಿಲಿಯಂ ಮಚಾದೊ, ನಿಯೋಜಿತ ಅಧ್ಯಕ್ಷ ಆಲ್ವಿನ್ ಅಮಿತ್ ಅರನ್ನ, ಶಶಿಕಲಾ ಕುಲಾಲ್, ಜಾಕ್ಸನ್ ಕಬ್ರಾಲ್, ಉಷಾ ಮರಾಠೆ ಉಪಸ್ಥಿತರಿದ್ದರು.