ಉಡುಪಿ : ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿ ಕುಮಾರ ಕೃಪದಲ್ಲಿ ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ರಾಜ್ಯ ಕಾರ್ಯದರ್ಶಿ ಗಂಗಾಧರ ಭರ್ತಿ, ಕಾರ್ಯಧ್ಯಕ್ಷರಾದ ವಾಸುದೇವರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ್ ಎಂ ಟಿ, ಉಡುಪಿ ಬ್ಲಾಕ್ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ, ಕಾಪು ಬ್ಲಾಕ್ ಅಧ್ಯಕ್ಷರುಗಳಾದ ಇಕ್ಬಾಲ್ ಅತ್ರಾಡಿ, ಭರತ್ ಕುಮಾರ್ ಶೆಟ್ಟಿ, ಯುವ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಂಜಯ್ ಕುಮಾರ್, ಅಲ್ಪಸಂಖ್ಯಾತ ಜಿಲ್ಲಾ ಅಧ್ಯಕ್ಷ ಫೈಝಲ್ ಅಹಮದ್, ಜಿಲ್ಲಾ ನಾಯಕರಾದ ರಜಾಕ್ ಉಚ್ಚಿಲ, ಆರ್. ಎನ್ ಕೋಟ್ಯಾನ್, ರಾಮರಾವ್, ದೇವರಾಜ್ ತೊಟ್ಟಂ, ಪದ್ಮನಾಭ ಆರ್ ಕೋಟ್ಯಾನ್, ಯು ಏ ರಶೀದ್, ಕೀರ್ತಿರಾಜ್, ಉದಯಕುಮಾರ್ ಮೇಸ್ತ, ಶೋಹಿಬ್, ಅಮಿತ್ ಸುವರ್ಣ, ಸಂಪತ್, ವಿಜಯಕೃಷ್ಣ, ಆದಿತ್ಯ, ಸಹಿತ ಜಿಲ್ಲೆ,ಬ್ಲಾಕ್ ಮಟ್ಟದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.