ಕಟಪಾಡಿ : ನವೋದಯ ಫ್ರೆಂಡ್ಸ್ ದುರ್ಗಾನಗರ ಏಣಗುಡ್ಡೆ ಇವರ ವತಿಯಿಂದ 77 ನೇ ಸ್ವಾತಂತ್ರ್ಯೋತ್ಸವವನ್ನು ಇಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಮೋದ್ ಪೂಜಾರಿಯವರು ವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು.
ಸನ್ಮಾನ : ಪಿಯುಸಿಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 99%ಅಂಕ ಗಳಿಸಿ ರಾಜ್ಯಕ್ಕೆ 5 ನೇ ಸ್ಥಾನಗಳಿಸಿದ ಗ್ರಾಮದ ವಿದ್ಯಾರ್ಥಿನಿ ಅನುಶ್ರೀ ಇವರನ್ನು ಹಾಗೂ 10ನೇ ತರಗತಿಯಲ್ಲಿ 90% ಕ್ಕಿಂತಲೂ ಅಧಿಕ ಅಂಕ ಗಳಿಸಿದ ಮೀನಾಕ್ಷಿ ಇವರನ್ನೂ ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮದ ಹಿರಿಯ ನಾಗರಿಕರಾದ ನಾರಾಯಣ ಪೂಜಾರಿ, ಮಂಜುನಾಥ್ ಸಂಘದ ಗೌರವಾಧ್ಯಕ್ಷರಾದ ಜಗನ್ನಾಥ್ ಕೋಟೆ, ಸಂಘದ ಮಾಜಿ ಅಧ್ಯಕ್ಷರಾದ ಸಂತೋಷ್ ಸುವರ್ಣ, ಪದಾಧಿಕಾರಿಗಳಾದ ದೀಪಕ್, ಜನಾರ್ದನ್, ಅರ್ಜುನ್ ಹಾಗೂ ಸದಸ್ಯರಾದ ಸ್ಟಿಫನ್, ಸಚಿನ್ ಸಂತೋಷ್,ದಿಲೀಪ್, ಅಜಿತ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಮಧುಕರ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.