ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಕಾಂಗ್ರೆಸ್ ಕಛೇರಿ ರಾಜೀವ್ ಭವನದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

Posted On: 15-08-2023 05:50PM

ಕಾಪು : ಕಾಂಗ್ರೆಸ್ ಕಛೇರಿ, ರಾಜೀವ್ ಭವನದಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ನೆರವೇರಿಸಿದರು.

ಈ‌ ಸಂದರ್ಭ ಮಾತನಾಡಿದ ಅವರು ಭಾರತದ ಸಾರ್ವಭೌಮತೆ, ಅಖಂಡತೆ, ಸಮಾನತೆ, ಸಾಮರಸ್ಯತೆ ಮತ್ತು ಸಹೋದರತ್ವದ ಉಳಿವಿಗಾಗಿ ಭಾರತೀಯರಾದ ನಾವೆಲ್ಲರೂ ಪಣತೊಡಬೇಕು. ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿದ ಭಾರತದ ಸಂವಿಧಾನವನ್ನು ರಕ್ಷಿಸುವ ರಕ್ಷಕರಾಗಿ, ದ್ವೇಷ, ಹಿಂಸೆ ಮತ್ತು ಕೋಮುವಾದವನ್ನು ಹಿಮ್ಮೆಟ್ಟಿಸಿ, ವಿಶೇಷವಾಗಿ ಮಹಿಳೆಯರ ರಕ್ಷಣೆಯನ್ನು ಹೊಣೆಗಾರಿಕೆಯೆಂದು ಭಾವಿಸಿ ಸತ್ಪ್ರಜೆಗಳಾಗಿ ಜೀವನ ನಡೆಸುವ ಧ್ಯೇಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಅನಿವಾರ್ಯತೆ ಪ್ರಸಕ್ತ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವೆನಿಸುತ್ತದೆ. ನಾಡಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ಶಾಂತಲತಾ ಶೆಟ್ಟಿ, ದಿನೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಹರೀಶ್ ನಾಯಕ್, ಶರ್ಫುದ್ದೀನ್ ಶೇಖ್, ಲಕ್ಷ್ಮೀಶ ತಂತ್ರಿ, ಮೊಹಮ್ಮದ್ ಸಾದಿಕ್, ಪ್ರಶಾಂತ್ ಜತ್ತನ್ನ, ಸದಾನಂದ ಶೆಟ್ಟಿ ಕೋಡು, ಶೋಭಾ ಬಂಗೇರ, ಸತೀಶ್ಚಂದ್ರ ಮೂಳೂರು, ರಾಧಿಕಾ ಸುವರ್ಣ, ಅಶ್ವಿನಿ ನವೀನ್, ಮೊಹಮ್ಮದ್ ನಯೀಮ್, ದಿವಾಕರ್ ಬಿ. ಶೆಟ್ಟಿ, ಫಾರೂಕ್ ಚಂದ್ರನಗರ, ದಿವಾಕರ್ ಡಿ.ಶೆಟ್ಟಿ, ಕೆ.ಎಚ್. ಉಸ್ಮಾನ್, ರಾಜೇಶ್ ಕುಲಾಲ್, ರೋಹನ್ ಕುತ್ಯಾರ್, ಜಾನ್ಸನ್ ಕರ್ಕಡ, ಶಶಿಕಾಂತ್ ಆಚಾರ್ಯ, ಯು.ಸಿ.ಶೇಖಬ್ಬ, ದೇವರಾಜ್ ಕೋಟ್ಯಾನ್, ಗೋಪಾಲ್ ಪೂಜಾರಿ, ಯಶವಂತ್ ಪಲಿಮಾರ್, ನಾಗಭೂಷಣ್ ರಾವ್, ಯಾಕೂಬ್ ಮಜೂರ್, ಅಝೀಜ್ ಪಕೀರ್ಣಕಟ್ಟೆ, ಶಾಬು ಸಾಹೇಬ್, ಬಬ್ಬಣ್ಣ ನಾಯಕ್, ಅಷ್ಫಾಕ್, ರವೀಂದ್ರ ಮಲ್ಲಾರ್ ಮತ್ತು ಅಶೋಕ್ ನಾಯರಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಸ್ವಾಗತಿಸಿ, ನಿರೂಪಿಸಿದರು.