ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಂಕರಪುರ : ಸಣ್ಣ ವಯಸ್ಸಿನಲ್ಲಿ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಇನ್ನಂಜೆಯ ಆದೀಶ್ ಆಚಾರ್ಯಗೆ ಸನ್ಮಾನ

Posted On: 17-08-2023 12:01PM

ಶಂಕರಪುರ : ರೋಟರಾಕ್ಟ್ ಕ್ಲಬ್ ಸುಭಾಸ್ ನಗರ ಮತ್ತು ರೋಟರಿ ಸಮುದಾಯ ದಳ ಇನ್ನಂಜೆ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 15ರಂದು ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅತ್ಯಂತ ಸಣ್ಣ ವಯಸಿನಲ್ಲಿ ಹೈನುಗಾರಿಕಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆಗೈಯುತ್ತಿರುವ ಇನ್ನಂಜೆಯ ಆದೀಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಮೋಹನ್ ದಾಸ್ ಶೆಟ್ಟಿ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಸಭಾಪತಿ ಗ್ಲಾಡ್ಸನ್ ಕುಂದರ್, ರೋಟರಿ ಸಮುದಾಯ ದಳ ಇನ್ನಂಜೆ ಸಭಾಪತಿ ಮಾಲಿನಿ ಇನ್ನಂಜೆ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಅಧ್ಯಕ್ಷ ಯಜ್ನೇಶ್ ಹೆಗ್ಡೆ,ರೋಟರಿ ಸಮುದಾಯ ದಳ ಇನ್ನಂಜೆಯ ಅಧ್ಯಕ್ಷ ರವಿಪ್ರಸಾದ್, ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಜೊತೆ ಕಾರ್ಯದರ್ಶಿ ನೇಹಾ ಶೆಟ್ಟಿ ಉಪಸ್ಥಿತರಿದ್ದರು.