ಶಿರ್ವ : ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ
Posted On:
26-08-2023 08:39PM
ಶಿರ್ವ : ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 26ರಂದು ಶಿರ್ವದ ಮೋನಿಶ್ ಕಾಂಪ್ಲೆಕ್ಸ್ ನ ರಿಯೋನ ಹಾಲ್ ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ ಸಂಫವು 2022-23 ಸಾಲಿನಲ್ಲಿ ವ್ಯವಹಾರ ನಡೆಸಿ ರೂ.44,70,853.15 ಲಾಭ ಗಳಿಸಿ, ಸದಸ್ಯರಿಗೆ 10% ಲಾಭಾಂಶ ವಿತರಿಸಲು ಶಕ್ತವಾಗಿದೆ. O% ಬಡ್ಡಿದರದಲ್ಲಿ ಕೃಷಿಕರಿಗೆ ಸುಮಾರು ಮೂರು ಕೋ.ರೂ.ಗಳಿಗೂ ಮಿಕ್ಕಿಸಾಲ ವಿತರಣೆ ನಡೆಸಿದ್ದು, ಸಿಬಂದಿಗಳ ಸಹಕಾರದಿಂದ ಶೇ.90% ಸಾಲಗಳನ್ನು ವಸೂಲಾತಿ ಮಾಡುವ ಪ್ರಯತ್ನ ನಡೆಸಲಾಗಿದೆ,ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಕೃಷಿ ತರಬೇತಿ ಶಿಬಿರಗಳನ್ನು ಆಯೋಜಿಸಿ, ಸಂಘದ ಕಾರ್ಯವ್ಯಾಪ್ತಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಂಡು ರೈತರ ಆದಾಯ ಹೆಚ್ಚಿಸಲು ಪ್ರಯತ್ನಿಸಲಾಗುತಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಸಂಘದ 2022-23 ನೇ ಸಾಲಿನ ಪರಿಶೋಧಿತ ಲೆಕ್ಕ ಪತ್ರಗಳ ವರದಿ ಮಂಡಿಸಿದರು.
ಸಂಘದ ಉಪಾಧ್ಯಕ್ಷೆ ವಾರಿಜ ಪೂಜಾರ್ತಿ, ನಿರ್ದೇಶಕರಾದ ನಾರಾಯಣ ನಾಯ್ಕ್, ಕೃಷ್ಣ ವಿಜಯ ಪೂಜಾರಿ, ರಮೇಶ್ ಪ್ರಭು, ಕೆ ವೀರೇಂದ್ರ ಪಾಟ್ಕರ್, ಅಶೋಕ್ ರಾವ್, ಉಮೇಶ್ ಆಚಾರ್ಯ, ರೀಟಾ ಮತಾಯಸ್, ವಿಲಿಯಂ ಬ್ಯಾಪಿಸ್ಟ್ ಮಚಾದೋ, ಸಂಜೀವ ಕುಲಾಲ್, ಹರಿಣಾಕ್ಷ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ಭಟ್ ವೇದಿಕೆಯಲ್ಲಿದ್ದರು.
ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಸ್ವಾಗತಿಸಿದರು. ಲೆಕ್ಕಿಗ ಹರೀಶ್ ಪೂಜಾರಿ ನಿರೂಪಿಸಿ, ಸಿಬ್ಬಂದಿ ಪ್ರದೀಪ್ ಪಾಟ್ಕರ್ ವಂದಿಸಿದರು.