ಶಿರ್ವ : ವಿಶ್ವ ಬ್ರಾಹ್ಮಣ ಸಮಾಜದ ಐಕ್ಯತೆಯ ದ್ಯೋತಕವಾಗಿ ಸರ್ವರ ಒಮ್ಮತ ಅಭಿಪ್ರಾಯದ ಪ್ರಕಾರ ವಿಶ್ವಕರ್ಮ ಧ್ವಜವು ಮೂಡಿಬರಲಿದೆ. ಇದೀಗ ಆರಂಭಿಕ ಹಂತದ ಚಿಂತನಾ ಸಭೆಗಳನ್ನು ಮಹಾಸಂಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಅವರು ಪಡುಕುತ್ಯಾರಿನ ಮಹಾ ಸಂಸ್ಥಾನದಲ್ಲಿ ಜರುಗಿದ ವಿಶ್ವಕರ್ಮ ಧ್ವಜದ ಎರಡನೇ ಚಿಂತನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಧ್ವಜದ ವಿಷಯದಲ್ಲಿ ಬಣ್ಣ, ಪ್ರಮಾಣ, ಆಕಾರ, ಲಾಂಛನ, ವಿನ್ಯಾಸದ ಬಗ್ಗೆ ಸಮಾಜದ ಎಲ್ಲಾ ಸಂಘಟನೆಗಳ ಅಭಿಪ್ರಾಯ ಪಡೆಯಲಾಗುವುದು.
ಇದಕ್ಕಾಗಿ ಸಮಾಜದ ದೇವಸ್ಥಾನಗಳಲ್ಲಿ, ಆನೆಗುಂದಿ ಗುರು ಸೇವಾ ಪರಿಷತ್ ನ ವಿಧಾನ ಸಭಾ ಕೇಂದ್ರಗಳಲ್ಲಿ ಸೇರಿದಂತೆ ಸಮಾಜದ ಸಂಘ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ವಿವಿಧ ಹಂತಗಳಲ್ಲಿ ಚಿಂತನಾ ಸಭೆಗಳನ್ನು ನಡೆಸಲಾಗುವುದು.
ಎರಡನೇ ಚಿಂತನಾ ಸಭೆಯಲ್ಲಿ ಬೆಂಗಳೂರಿನ ವೇದ ಆಗಮ ಸಂಸ್ಕೃತ ಮಹಾಪಾಠ ಶಾಲೆಯ ಸಂಸ್ಕೃತ ಶಿಕ್ಷಕರಾದ ಕೆ ರಾಘವೇಂದ್ರ ಸ್ತಪತಿ ಬೆಂಗಳೂರು ಇವರು ವಿಶ್ವಕರ್ಮ ಧ್ವಜದ ಬಗ್ಗೆ ಪುರಾಣ ಹಿನ್ನೆಲೆ ಮತ್ತು ವಿವಿಧ ಮಾದರಿಯ ಧ್ವಜಗಳೊಂದಿಗೆ ತಮ್ಮ ಅಭಿಪ್ರಾಯ ಮಂಡಿಸಿದರು.
ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ಇಲಾಖೆಯ ವಿಶ್ರಾಂತ ಹೆಚ್ಚುವರಿ ಕಾರ್ಯದರ್ಶಿ ಬಿ. ಬಿ ಪತ್ತಾರ ಬೆಂಗಳೂರು, ಆನೆಗುಂದಿ ಮಠದ ಅಧ್ಯಕ್ಷ ಹರಿಶ್ಚಂದ್ರ ಎನ್ ಆಚಾರ್ಯ ಬೆಂಗಳೂರು, ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣ ಸಂಘ ಬೆಂಗಳೂರು ಅಧ್ಯಕ್ಷ ತುಕಾರಾಮ್ ಆಚಾರ್ಯ ಬೆಂಗಳೂರು, ಗುರು ಸೇವಾ ಪರಿಷತ್ ಬೆಂಗಳೂರು ಸಮಿತಿ ಅಧ್ಯಕ್ಷ ಎಂ.ಜಿ ನಾಗೇಶ್ ಆಚಾರ್ಯ ಬೆಂಗಳೂರು, ಕನಕಪುರ ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಶಿವರಾಮ ಆಚಾರ್ಯ ಕನಕಪುರ. ರವಿ ಆಚಾರ್ಯ ಬೆಂಗಳೂರು, ಪಾಂಗಾಳ ಜನಾರ್ಧನ ಆಚಾರ್ಯ ಬೆಂಗಳೂರು, ಅರುಣೋದಯ ಆಚಾರ್ಯ ಬೆಂಗಳೂರು, ಮಹಾಬಲೇಶ್ವರ ಆಚಾರ್ಯ ಬೆಂಗಳೂರು, ಗಿರೀಶ ಆಚಾರ್ಯ ಏಳಂದೂರು, ಪ್ರತಾಪ್ ಆಚಾರ್ಯ ಬೆಂಗಳೂರು, ಮಂಜುನಾಥ ಆಚಾರ್ಯ ರಾಮನಗರ ಬೆಂಗಳೂರು, ಸೋಹನ್ ಆದಿತ್ಯ ಆಚಾರ್ಯ ಬೆಂಗಳೂರು, ಮನೋಹರ ಕೆ ಗುಡೂರು,
ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಜನಾರ್ದನ ಆಚಾರ್ಯ ಆರಿಕ್ಕಾಡಿ, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ಪುರುಷೋತ್ತಮ ಆಚಾರ್ಯ ಪುತ್ತೂರು,ಕೋಟ ಗಣೇಶ ಆಚಾರ್ಯ, ರೂಪೇಶ್ ಆಚಾರ್ಯ ಶಿರ್ವ, ಪೆರ್ಣೆ ಮಧುಸೂದನ ಆಚಾರ್ಯ ಕಾಸರಗೋಡು, ಗಣೇಶ್ ಆಚಾರ್ಯ ಕೆಮ್ಮಣ್ಣು, ವಿಘ್ನೇಶ್ ಕುಮಾರ್ ಕಾಸರಗೋಡು ಅಭಿಪ್ರಾಯ ಮಂಡಿಸಿದರು.
ಧ್ವಜ ಸಮಿತಿಯ ಸಂಚಾಲಕರಾದ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು ಪ್ರಾಸ್ತಾವಿಕ ಮಾತುಗಳಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು