ಕಳತ್ತೂರು : 2023-24 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪಿ.ಕೆ.ಎಸ್ ಪ್ರೌಢಶಾಲೆ ಕಳತ್ತೂರು ಇಲ್ಲಿ ನಡೆಯಿತು.
ಆನೆಗುಂದಿ ಸೂರ್ಯಚೈತನ್ಯ ಶಾಲೆ ಕುತ್ಯಾರು ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ, ದ್ವಿತೀಯ, ತೃತೀಯ ಬಹುಮಾನ ಪಡೆದರು.
ಆಶುಭಾಷಣ ಸ್ಪರ್ಧೆ ರಜತ್ (ಪ್ರಥಮ), ಸಂಸ್ಕೃತ ಭಾಷಣ ಮೌನೇಶ್ (ಪ್ರಥಮ), ರಂಗೋಲಿ ವಂಶಿಕ
(ಪ್ರಥಮ), ಧಾರ್ಮಿಕ ಪಠಣ ಬೋಧಯನ(ಪ್ರಥಮ), ಇಂಗ್ಲೀಷ್ ಕಂಠಪಾಠ ಪ್ರಾಪ್ತಿ (ಪ್ರಥಮ), ಕತೆ ಹೇಳುವುದು ಧನ್ವಿ (ಪ್ರಥಮ), ಚಿತ್ರಕಲೆ ಅದಿತಿ ಆಚಾರ್ಯ (ಪ್ರಥಮ), ಸಂಸ್ಕೃತ ಭಾಷಣ ಸೋಹನ್ (ಪ್ರಥಮ) ಬಹುಮಾನ ಪಡೆದಿರುತ್ತಾರೆ.
ದ್ವಿತೀಯ ಬಹುಮಾನ 11 ವಿದ್ಯಾರ್ಥಿಗಳು ಪಡೆದಿರುತ್ತಾರೆ. ತೃತೀಯ ಬಹುಮಾನ 8 ವಿದ್ಯಾರ್ಥಿಗಳು ಪಡೆದಿರುತ್ತಾರೆ.