ಪಡುಬಿದ್ರಿ : ಇಲ್ಲಿನ ನಡ್ಸಾಲು ಗ್ರಾಮದ ಕಂಚಿನಡ್ಕ ಶ್ರೀ ಗುರು ರಾಘವೇಂದ್ರ ಮಂದಿರದಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 2 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.
ಆಗಸ್ಟ್ 31, ಗುರುವಾರ ಪೂರ್ವಾರಾಧನೆ, ಸೆಪ್ಟೆಂಬರ್ 01, ಶುಕ್ರವಾರ ಮಧ್ಯಾರಾಧನೆ, ಸೆಪ್ಟೆಂಬರ್ 02, ಶನಿವಾರ ಉತ್ತರಾಧನೆ (ಬೆಳಿಗ್ಗೆ ಗಂಟೆ 6ರಿಂದ ಸಂಜೆ 7ರ ತನಕ) ಶ್ರೀ ಗುರುರಾಘವೇಂದ್ರ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ರಾಯರ ಆರಾಧನಾ ಮಹೋತ್ಸವ ಮತ್ತು ಅಖಂಡ ಭಜನಾ ಸಂಕೀರ್ತನೆ
- ಮಹಾ ಪ್ರಸಾದ ಅದೇ ದಿನ ಮಧ್ಯಾಹ್ನ ಗಂಟೆ 1 ರಿಂದ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.