ಕಾಪು : ಬೆಂಗಳೂರಿನ ಸಂಜಯ್ ಪಿತಾಂಬರರಿಂದ ಸೈಕಲ್ ಸಂಚಾರ - ಶಂಕರಪುರ ಟು ಮಹಾರಾಷ್ಟ್ರ ; ಶ್ರೀ ಸಾಯಿನಾಥರ ಮಂದಿರ ಭೇಟಿ
Posted On:
30-08-2023 05:34PM
ಕಾಪು : ಬೆಂಗಳೂರಿನ ಸಂಜಯ್ ಪಿತಾಂಬರ ದೇಸಾಯಿಯವರು ಕಾಪು ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಿಂದ ಹೊರಟು ಭಾರತದಾದ್ಯಂತ
25,000 ಕಿ.ಲೋ ಮೀಟರ್ ಸೈಕಲ್‌ನಲ್ಲಿ ಸಂಚಾರಿಸಿ 6000ಕ್ಕೂ ಹೆಚ್ಚು ಶ್ರೀ ಸಾಯಿನಾಥರ ಮಂದಿರಕ್ಕೆ ಭೇಟಿ ನೀಡಿ ಶ್ರೀ ಸಾಯಿನಾಥಾರ ತತ್ವ ಪ್ರಚಾರದ ಜೊತೆಗೆ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪ ವಿಶ್ವಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆಯ ಮಹತ್ವವನ್ನು ಜನರಿಗೆ ತಿಳಿಯಪಡಿಸುತ್ತಾ ಸಂಚರಿಸುವ ಬಗೆಗೆ ಇಂದು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಮಾಹಿತಿ ನೀಡಿದರು.
ಆಗೋಸ್ಟ್ 31ರ ಗುರುವಾರ ಬೆಳಿಗ್ಗೆ 8:20ಕ್ಕೆ ಉಡುಪಿ ಜಿಲ್ಲೆಯ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಆರ್ಶೀವಾದ ಪಡೆದು ಯಾತ್ರೆ ಪ್ರಾರಂಭವಾಗಿ ಮಹಾರಾಷ್ಟ್ರದ ಶಿರಡಿಯಲ್ಲಿ ಯಾತ್ರೆ ಕೊನೆಗೊಳ್ಳಲಿದೆ ಎಂದರು.
ಸಂಚಾರದ ಉದ್ದ ಅಗಲಕ್ಕೂ ನನ್ನ ಧ್ಯೇಯ “ಸಾಮಾನ್ಯ ಮನುಷ್ಯ ತನ್ನ ಜೀವನಕ್ಕಾಗಿ ಹೋರಾಡುತ್ತಾನೆ” ಎಂಬುದಾಗಿ ಇರುತ್ತದೆ ಎಂದು
ಸಂಜಯ್ ಪಿತಾಂಬರ ದೇಸಾಯಿ ಹೇಳಿದರು.
ಈ ಸಂದರ್ಭ ಸಂಜಯ್ ಪಿತಾಂಬರ ದೇಸಾಯಿ,
ಸುಧಾಕರ ಶೆಟ್ಟಿ, ಸತೀಶ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು.