ಕಾಪು : ಜೆಸಿಐ ಶಂಕರಪುರ ಜಾಸ್ಮಿನ್
ಇದರ ಜೆಸಿ ಸಪ್ತಾಹ ಜೈತ್ರ 2023 ಮೂರನೇ ದಿನದ ಅಂಗವಾಗಿ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಕೊಡಿಯಲ್ಲಿ ಸುಸ್ವಾಗತ ಮತ್ತು ಶುಭವಿದಾಯ ಫಲಕದೊಂದಿಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಕಸ ಹಾಕುವವರಿಗೆ ಹೈಕೋರ್ಟ್ ದಂಡನೆ ಬಗ್ಗೆ ಫಲಕ ಅಳವಡಿಕೆ ಮಾಡಲಾಯಿತು.
ಈ ಫಲಕವನ್ನು ಜೆಸಿಐ ಶಂಕರಪುರ ಜಾಸ್ಮಿನ್ ನ ಸ್ಥಾಪಕ ಕಾರ್ಯದರ್ಶಿ ಮತ್ತು ಪೂರ್ವಧ್ಯಕ್ಷರು ಆದ ಜೆಸಿ ನವೀನ್ ಅಮೀನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಶಂಕರಪುರ ಜಾಸ್ಮಿನ್ ಮತ್ತು ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಜೆಸಿ ಮಾಲಿನಿ ಶೆಟ್ಟಿ, ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಪಂಚಾಯತ್ ಸದಸ್ಯ ದಿವೇಶ್ ಶೆಟ್ಟಿ, ವಲಯ ತರಬೇತುದಾರ ಜೆಸಿ ಸಂತೋಷ್ ಕುಮಾರ್, ಮತ್ತು ಶಂಕರಪುರ ಜಾಸ್ಮಿನ್ ನ ಪೂರ್ವಧ್ಯಕ್ಷರುಗಳು, ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.