ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ರಾಜೇಶ್ ಕುಲಾಲ್ ಗೆ ಆರ್ಥಿಕ ನೆರವು : ಕಾಪು ಕುಲಾಲ ಯುವ ವೇದಿಕೆ , ಕಾಪು ಕುಲಾಲ ಸಂಘದಿಂದ ಸಹಾಯಹಸ್ತ

Posted On: 25-09-2023 09:51PM

ಕಾಪು : ಗ್ಯಾಂಗ್ರೀನ್ ಕಾಯಿಲೆಯಿಂದ ಕಾಲು ಕಳೆದುಕೊಂಡ ಕಾಪುವಿನ ಎಲ್ಲೂರು ಗ್ರಾಮ ಪಂಚಾಯತ್ ಅದಮಾರು ನಿವಾಸಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಸ್ತೃತ ವರದಿ ಬಂದಿತ್ತು. ಈ ವರದಿಗೆ ತಕ್ಷಣ ಸ್ಪಂದಿಸಿದ ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಪು ಕುಲಾಲ ಸಂಘವು ಬಡ ಕುಟುಂಬಕ್ಕೆ‌ಸಹಾಯಹಸ್ತ ಚಾಚುವ ಭರವಸೆಯನ್ನು ನೀಡಿತ್ತು. ಈ ನಿಮಿತ್ತ ಸಹೃದಯಿ ದಾನಿಗಳ ಬೆಂಬಲದಿಂದ ಒಟ್ಟುಗೂಡಿದ ರೂ.75,000 ಸಹಾಯಧನವನ್ನು ಸೋಮವಾರ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಈ ಸಂದರ್ಭ ಕಾಪು ಕುಲಾಲ ಯುವ ವೇದಿಕೆಯ ಉದಯ ಕುಲಾಲ್, ಕಾಪು ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ, ಆಸರೆ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಸತೀಶ್ ಕುಲಾಲ್ ಕಡಿಯಾಳಿ, ಸರ್ವಜ್ಞ ಆಸರೆ ಕಿರಣ ಬಳಗದ ಪ್ರಭಾಕರ್ ಇನ್ನ, ನಿವೃತ್ತ ಸೈನಿಕ ಬಾಲಕೃಷ್ಣ ಭಂಡಾರಿ, ಬೊಗ್ಗು ಮೂಲ್ಯ ಬೇಲಾಡಿ, ಶಂಕರ ಮೂಲ್ಯ ಬೇಲಾಡಿ, ಸಂತೋಷ್ ಶೆಟ್ಟಿ ಬರ್ಪಾಣಿ, ಸುಮಂತ್ ಕುಲಾಲ್ ಪಾದೂರು, ರವೀಂದ್ರ ಕುಲಾಲ್ ಪಣಿಯೂರು, ಕಾಂತಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಕುಲಾಲ್ ಬೇಲಾಡಿ, ಮಹೇಶ್ ಕುಲಾಲ್ ಬೇಲಾಡಿ, ಸತೀಶ್ ಕುಲಾಲ್ ಉಳಿಯಾರು, ಜಿಲ್ಲಾ ಕುಲಾಲ ಸಂಘಟನೆಗಳು, ದಾನಿಗಳು ಉಪಸ್ಥಿತರಿದ್ದರು.

ನೆರವು ನೀಡುವವರು ರಾಜೇಶ್ ಕುಲಾಲ್ ಅವರ ಪತ್ನಿ ವಿನೋದ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು.

ಬ್ಯಾಂಕ್ ಖಾತೆ ಮಾಹಿತಿ ಹೀಗಿದೆ: Contact Number::9008559310 Google pay number 9008559310 Bank detail CANARA BANK Mudharangadi. NAME: Vinoda A/c number: 110106025209 IFSC: CNRB0000638.