ಪಡುಬಿದ್ರಿ : ಪಡುಬಿದ್ರಿ ಬ್ಲೂ ಫ್ಲಾಗ್ ಬೀಚಿನಲ್ಲಿ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ
Posted On:
30-09-2023 08:57PM
ಪಡುಬಿದ್ರಿ : ನಮ್ಮ ನಮ್ಮ ಮನೆಯಿಂದಲೇ ಸ್ವಚ್ಛ ತೆ ಬಗ್ಗೆ ಅರಿವು ಮೂಡಿಸುವ ಮೂಲಕ ಪ್ರತಿ ಮನೆಯೂ ,ಪರಿಸರವೂ ಸ್ವಚ್ಛ ಇಡುವುದು ನಮ್ಮ ಆದ್ಯ ಕರ್ತವ್ಯ ಎಂದು ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹೇಳಿದರು.
ಅವರು ಜಿಲ್ಲಾಡಳಿತ ಉಡುಪಿ ಜಿಲ್ಲೆ, ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ, ಬ್ಲೂ ಫ್ಲಾಗ್ ಬೀಚ್ ಪಡುಬಿದ್ರಿ ಇದರ ವತಿಯಿಂದ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚಿನಲ್ಲಿ ಶನಿವಾರ ನಡೆದ "ಸ್ವಚ್ಛತಾ ಪಕ್ವಾಡ" ಸ್ವಚ್ಛತಾ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ನಮ್ಮ ದೇಶ ವಿಶ್ವಗುರು ಆಗುವ ಸಂದರ್ಭ ಕಾಣುತ್ತೇವೆ. ಸ್ವಚ್ಚತಾ ಕಾರ್ಯಕ್ರಮಗಳನ್ನು ಮಾಡಿ ಇತರರಿಗೆ ಮಾದರಿಯಾಗಬೇಕು. ಈ ಮೂಲಕ ದೇಶಕ್ಕೆ ನಮ್ಮ ಸೇವೆ ನೀಡಬೇಕು ಎಂದು ಕರೆಯಿತ್ತರು.
ಕಾರ್ಯಕ್ರಮದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ಅಜಯ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು., ಪಡುಬಿದ್ರಿ ಪೋಲೀಸ್ ಠಾಣಾ ಅಪರಾಧ ವಿಭಾಗ ಉಪನಿರೀಕ್ಷಕ ಸುದರ್ಶನ್ ದೊಡ್ಮನೆ, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.