ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜು - ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

Posted On: 04-10-2023 06:50PM

ಪಲಿಮಾರು : ಮಾದಕ ದ್ರವ್ಯಗಳನ್ನು ಸೇವಿಸುವವರಿಗಲ್ಲ, ವ್ಯಾಪಾರಿಗಳಿಗೆ ಮಾತ್ರ ಲಾಭವಾಗಿದೆ ಎಂಬುದಾಗಿ ಪಡುಬಿದ್ರಿ ಆರಕ್ಷಕ ಠಾಣೆಯ ಉಪ ಠಾಣಾಧಿಕಾರಿ ಸುರೇಶ್ ಅವರು ಅಭಿಪ್ರಾಯಪಟ್ಟರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ವಿಧ್ಯಾರ್ಥಿಗಳಿಗೋಸ್ಕರ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾದಕ ದ್ರವ್ಯಗಳ ವಿವಿಧ ನಮೂನೆಗಳು, ಅವುಗಳ ಸೇವನೆಯಿಂದ ಆಗುವ ವೈಯಕ್ತಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳು,ಅವುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.

ಮತ್ತೋರ್ವ ಸಹಾಯಕ ಠಾಣಾಧಿಕಾರಿ ದಿವಾಕರ್ ಮಾತನಾಡಿ ಯುವಜನರಲ್ಲಿ ಇಂದು ಮಾದಕ ದ್ರವ್ಯಗಳ ಸೇವನೆ ಹೆಚ್ಚಾಗುತ್ತಿದೆ. ಪೋಷಕರು, ತಮ್ಮ ಮಕ್ಕಳು ಕಲಿತು ಒಳ್ಳೆಯ ಭವಿಷ್ಯವನ್ನು ರೂಪಿಸಬೇಕು ಎಂದು ಕೇಳಿದ್ದನ್ನೆಲ್ಲಾ ಒದಗಿಸಲು ಪ್ರಯತ್ನ ಪಡುತ್ತಾರೆ. ಆದರೆ ಮಕ್ಕಳು ಪೋಷಕರ ಗಮನಕ್ಕೆ ಬಾರದ ಹಾಗೆ ದಾರಿ ತಪ್ಪುತ್ತಿದ್ದಾರೆ. ವಿಧ್ಯಾರ್ಥಿ ಜೀವನದಲ್ಲಿ ಸಮಯದ ಸದುಪಯೋಗ ಮಾಡಿಕೊಂಡು, ಈ ಭಾಗದವರು ಸರ್ಕಾರಿ ಸೇವೆಗಳಿಗೆ ಸೇರಲು ಹೆಚ್ಚಿನ ಆಸಕ್ತಿ ತೋರಿಸಬಹುದು ಎಂಬುದಾಗಿ ಕರೆಕೊಟ್ಟರು.

ಸಹಶಿಕ್ಷಕ ಪ್ರಸನ್ನ, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಸ್ವಾಗತಿಸಿ, ಕನ್ನಡ ಉಪನ್ಯಾಸಕರಾದ ಜ್ಯೋತಿ ವಂದಿಸಿದರು.