ಬಂಟಕಲ್ಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ (ಲಿ.) ಶಾಖೆಯಲ್ಲಿ ಮಂಗಳವಾರ ಇ-ಸ್ಟಾಂಪಿಂಗ್ ಸೇವೆ ಲೋಕಾರ್ಪಣೆಗೊಂಡಿತು.
ಕರ್ನಾಟಕ ಬ್ಯಾಂಕ್ ಬಂಟಕಲ್ಲು ಶಾಖಾ ಪ್ರಬಂಧಕರಾದ ವಿಘ್ನೇಶ್ವರ ಉಡುಪ ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಶಿರ್ವ ಹೊರತು ಪಡಿಸಿ ಈ ಭಾಗದಲ್ಲಿ ಇ-ಸ್ಟಾಂಪಿಂಗ್ ಸೇವೆ ಇಲ್ಲ. ಈ ಭಾಗದ ನಾಗರಿಕರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಈ ವ್ಯವಸ್ಥೆಯನ್ನು ಒದಗಿಸಿದ ಶ್ರೀ ದುರ್ಗಾಪರಮೇಶ್ವರೀ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿಯ ಅಧ್ಯಕ್ಷರು, ಪದಾಧಿಕಾರಿಗಳನ್ನು ಅಭಿನಂದಿಸಿದರು.
ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಸೊಸೈಟಿಯ ಅಧ್ಯಕ್ಷರಾದ ಕೊಡಂಗೆ ಅಶೋಕ ಕಾಮತ್ ಮಾತನಾಡಿ ನಮಗೆ ಲಾಭಾಂಶ ಮುಖ್ಯವಲ್ಲ. ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವಾ ಭಾವನೆಯಿಂದ ಇ ಸ್ಟಾಂಪಿಂಗ್ ವ್ಯವಸ್ಥೆ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ನಿರ್ದೇಶಕರುಗಳಾದ ರಾಮಕೃಷ್ಣ ನಾಯಕ್, ಕಡ್ತಾಲ್ ಗಣಪತಿ ನಾಯಕ್, ಜಯಂತಿ ನಾಯಕ್, ಶಾಖಾ ಪ್ರಬಂಧಕ ಸುಧಾಕರ್ ನಾಯಕ್, ಸಲಹಾ ಸಮಿತಿಯ ಸದಸ್ಯರಾದ ಹರೀಶ್ ಪಾಟ್ಕರ್, ರಂಜಿತ್ ಕೆ.ಎಸ್, ಸಿಬ್ಬಂದಿಗಳಾದ ಅಭಿಲಾಷ್ ಕಾಮತ್, ಚೇತನ್ ನಾಯಕ್, ವಸಂತಿ ವಾಗ್ಲೆ, ನರೇಂದ್ರ ನವೆಲ್ಕರ್, ಗ್ರಾಹಕರು ಉಪಸ್ಥಿತರಿದ್ದರು.
ನಿರ್ದೇಶಕರಾದ ಕೋಡುಗುಡ್ಡೆ ರವೀಂದ್ರ ಪಾಟ್ಕರ್ ನಿರೂಪಿಸಿ ಸ್ವಾಗತಿಸಿದರು. ಕಾರ್ಯನಿರ್ವಾಹಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ ವಂದಿಸಿದರು.