ಪಡುಬಿದ್ರಿ : ಕ್ರೀಡೆಗಳು ವ್ಯಕ್ತಿಯನ್ನು ಆರೋಗ್ಯವಂತ, ಕ್ರಿಯಾಶೀಲನನ್ನಾಗಿ ಮಾಡಲು ಸಹಕಾರಿ - ಶರತ್ ಶೆಟ್ಟಿ
Posted On:
01-11-2023 03:18PM
ಪಡುಬಿದ್ರಿ : ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕ್ರೀಡೆಗಳು ಯಾವಾಗಲೂ ಒಬ್ಬ ವ್ಯಕ್ತಿಯನ್ನು ಆರೋಗ್ಯಕರವಾಗಿ ಸಮೃದ್ಧವಾಗಿ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಆರೋಗ್ಯ ವಂತ ದೇಹದಿಂದ ಮಾತ್ರ ಮನಸ್ಸು ಆರೋಗ್ಯ ವಾಗಿರಲು ಸಾಧ್ಯ. ನಾವು ಎಲ್ಲಾ ಸಮಯದಲ್ಲೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ನಾವು ಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಬಹುದು ಅದ್ದರಿಂದ ಜೀವನದಲ್ಲಿ ಕ್ರೀಡೆಗಳು ಅವಶ್ಯಕ ಎಂದು ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷ ಶರತ್ ಶೆಟ್ಟಿ ಹೇಳಿದರು.
ಪಡುಬಿದ್ರಿ ಬೋರ್ಡ್ ಶಾಲಾ ಮ್ಯೆದಾನದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ , ಇನ್ನರ್ ವೀಲ್ ಕ್ಲಬ್ , ರೋಟರಿ ಸಮುದಾಯದಳ ಹಾಗು ರೋಟರಾಕ್ಟ್ ಕ್ಲಬ್ ವತಿಯಿಂದ ನಡೆದ ಕುಟುಂಬ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ವಲಯ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಮಾತನಾಡಿ ಪ್ರತಿಯೊಂದು ಆಟಕ್ಕೂ ವಿಶಿಷ್ಟವಾದ ಉದ್ದೇಶ ಹಾಗು ಮೌಲ್ಯವಿದೆ. ನಾವು ಆಡುವ ಪ್ರತಿಯೊಂದು ಕ್ರೀಡೆ ಮತ್ತು ಆಟವು ನಮಗೆ ಶಿಸ್ತನ್ನು ಕಲಿಸುತ್ತದೆ. ಕ್ರೀಡೆಗಳು ನಮಗೆ ಅಮೂಲ್ಯ ವಾದ ಪಾಠವನ್ನು ಕಲಿಸುತ್ತದೆ. ಕಷ್ಟಗಳ ಹೊರತಾಗಿಯೂ ನಾವು ಕ್ರೀಡಾಪಟುವಾಗಿ ಅನುಭವಿಸಬೇಕು. ಆದ್ದರಿಂದ ನಾವು ನಮ್ಮ ಜೀವನದಲ್ಲಿ ಆಟಗಳು ಮತ್ತು ಕ್ರೀಡೆಗಳ ಮೌಲ್ಯ ಮತ್ತು ಮಹತ್ವವನ್ನು ಗ್ರಹಿಸ ಬೇಕು ಎಂದರು.
ಸನ್ಮಾನ : ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಗೊಂಡ ಕಬಡ್ಡಿ ಆಟಗಾರ್ತಿ ಗಣ್ಯ ಜಿ. ಸುವರ್ಣ ಹೆಜಮಾಡಿಯವರನ್ನು ಸನ್ಮಾನಿಸಲಾಯಿತು.
ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದರು.
ರೋಟರಿ ವಲಯ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಕೆ., ಇನ್ನರ್ ವೀಲ್ ಅಧ್ಯಕ್ಷೆ ನಮೃತಾ ಮಹೇಶ್, ಪೂರ್ವ ಸಹಾಯಕ ಗವರ್ನರ್ ಗಳಾದ ಮಾಧವ ಸುವರ್ಣ, ಗಣೇಶ್ ಅಚಾರ್ಯ ಉಚ್ಚಿಲ , ಕರ್ನಾಟಕ ಪಬ್ಲಿಕ್ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಕೃಷ್ಣ ಬಂಗೇರ, ಕಾಪು ಜೀವವಿಮಾ ನಿಗಮದ ನಿವೃತ ಅಭಿವೃದ್ಧಿ ಅಧಿಕಾರಿ ರಮೇಶ್ ಯು, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಎರ್ಮಾಳ್, ವಲಯ ಸೇನಾನಿ ರಿಯಾಜ್ ಮುದರಂಗಡಿ, ವಲಯ ಸಂಯೋಜಕ ರಮೀಜ್ ಹುಸೇನ್, ವ್ಯೆದ್ಯಾಧಿಕಾರಿ ಪಯಶಸ್ವಿನಿ ಶೆಟ್ಟಿಗಾರ್, ಕ್ರೀಡಾಪಟು ಪ್ರಮೋದ್ ಸಾಲ್ಯಾನ್ ಎರ್ಮಾಳ್, ರೋಟರಿ ಸಮುದಾಯದಳ ಅಧ್ಯಕ್ಷ ರಚನ್ ಸಾಲ್ಯಾನ್, ಕಾರ್ಯದರ್ಶಿ ಪ್ರತೀಕ್ ಶೆಟ್ಟಿ ರೋಟರಾಕ್ಟ್ ಅಧ್ಯಕ್ಷೆ ತನಿಷಾ ಜಿ ಕುಕ್ಯಾನ್, ಕಾರ್ಯದರ್ಶಿ ಪ್ರತೀಕ್ ಅಚಾರ್ಯ, ರೋಟರಿ ಕಾರ್ಯದರ್ಶಿ ಪವನ್ ಸಾಲ್ಯಾನ್ ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಶಟಲ್ ಬಾಡ್ಮಿಂಟನ್, ಕ್ರಿಕೆಟ್, ತ್ರೋಬಾಲ್, ಹಗ್ಗ-ಜಗ್ಗಾಟ , ಅಥ್ಲೆಟಿಕ್ಸ್ ವಿಭಾಗದಲ್ಲಿ ಶಾಟ್ ಪುಟ್ ,100 ಮೀ., 200 ಮೀ. ಓಟಗಳನ್ನು ವಿವಿಧ ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು.
ದ್ಯೆಹಿಕ ಶಿಕ್ಷಕ ಮೋಹನ್ ಕರ್ಕೇರ, ಸುರೇಶ್ ಎರ್ಮಾಳ್, ಶ್ಯಾಮ್ ಸುಂದರ್ ಮತ್ತು ಮಹಮ್ಮದ್ ಗಫೂರ್ ತೀರ್ಪುಗಾರರಾಗಿ ಸಹಕರಿಸಿದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಬಿ.ಎಸ್ ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.