ಕಟಪಾಡಿ : ಆಯುಷ್ ಇಲಾಖೆ, ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ, ಕಟಪಾಡಿ ಗ್ರಾಮ ಪಂಚಾಯತ್, ಎಸ್.ವಿ.ಎಸ್. ಹಳೆವಿದ್ಯಾರ್ಥಿ ಸಂಘ ಕಟಪಾಡಿ, ಮಹಿಳಾ ಮಂಡಲ ಕಟಪಾಡಿ, ಕೋಟೆ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಕಟಪಾಡಿ, ಸೃಷ್ಠಿ ಫೌಂಡೇಶನ್ ಕಟಪಾಡಿ, ಎಸ್.ವಿ.ಎಸ್.ವಿದ್ಯಾವರ್ಧಕ ಸಂಘ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಯುರ್ವೇದ ಆಸ್ಪತ್ರೆ ಉಡುಪಿ ಇದರ ರಾಷ್ಟ್ರೀಯ ಅಯುಷ್ ಅಭಿಯಾನದ ಯೋಜನೆಯಡಿ
ನವೆಂಬರ್ 9ರಂದು ಬೆಳಗ್ಗೆ 9.30ರಿಂದ 12.30ರ ವರೆಗೆ ಕಟಪಾಡಿ ಮಹಿಳಾ ಮಂಡಲ ಸಭಾ ಭವನದಲ್ಲಿ ಆಯುಷ್ ಆರೋಗ್ಯ ಶಿಬಿರ ನಡೆಯಲಿದೆ.
ಈ ಶಿಬಿರದಲ್ಲಿ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಶಿಬಿರದಲ್ಲಿ ಅಸ್ತಮಾ, ಗ್ಯಾಸ್ಟಿಕ್, ವಾತವ್ಯಾಥಿ ಮತ್ತು ಸ್ತ್ರೀ ಸಂಬಂಧಿ ಖಾಯಿಲೆಗಳು ಹಾಗೂ ಎಲ್ಲಾ ರೀತಿಯ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಶಿಬಿರದಲ್ಲಿ ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ದಿನಕರ್ ಡೋಂಗ್ರೆ, ತಜ್ಞ ವೈದ್ಯರಾದ ಡಾ.ಸ್ವಾತಿ ಆರೋಗ್ಯ ತಪಾಸಣೆ ನಡೆಸಲಿರುವರು.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಘಟಕರಾದ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ನಾಗೇಶ್ ಕಾಮತ್ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.