ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ದಿವಾಕರ ಬಿ ಶೆಟ್ಟಿ ಆಯ್ಕೆ

Posted On: 10-11-2023 06:20PM

ಕಾಪು : ಪತ್ರಿಕೋದ್ಯಮ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಾಪುವಿನ ಸಮಾಜ ಸೇವಕ ದ್ವಾದಶಿ ಪಬ್ಲಿಸಿಟಿಯ ಮಾಲಕರಾದ ದಿವಾಕರ ಬಿ ಶೆಟ್ಟಿ ಇವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ(ರಿ) ಕೇರಳ ಇದರ ಗಡಿನಾಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊಡಮಾಡುವ ಪತ್ರಿಕೋದ್ಯಮ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ. ಕಾಪು ತಾಲೂಕು ಪರಿಸರದಲ್ಲಿ ಸಮಾಜ ಸೇವಕರಾಗಿ ಜನಸಂಪರ್ಕ ಜನಸೇವಾ ವೇದಿಕೆ ಮೂಲಕ ಮದ್ಯವರ್ಜನ ಶಿಬಿರ, ನಾಯಿಗಳಿಗೆ ಉಚಿತ ರೇಬಿಸ್ ಲಿಸಿಕಾ ಶಿಬಿರ, ಆರೋಗ್ಯ ಶಿಬಿರ, 1000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು 20 ವರ್ಷಗಳಿಂದ ಸತತವಾಗಿ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಏರ್ಪಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ ಅಲ್ಲದೆ ಸರಕಾರದಿಂದ ಸಿಗುವ ವೃದ್ಯಾಪ್ಯ ವೇತನ, ವಿಧವೆ ವೇತನ, ಅಂಗವಿಕಲರ ವೇತನ, ಸುಮಾರು 500ಕ್ಕೂ ಮಿಕ್ಕಿ ಫಲಾನುಭವಿಗಳಿಗೆ ದೊರಕಿಸಿ ಕೊಟ್ಟಿರುತ್ತಾರೆ ವಿವಿಧ ಸಂಘ ಸಂಸ್ಥೆಗಳಿಂದ ಬಡವರಿಗೆ ಮನೆ ಕಟ್ಟಿಸಿ ಕೊಟ್ಟ ಆಶ್ರಯದಾತರಾಗಿದ್ದಾರೆ.

ರಂಗ ಕಲಾವಿದರಿಗೆ ಸನ್ಮಾನ ಸತ್ಯನಾರಾಯಣ ಪೂಜೆ ಅಲ್ಲದೆ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ ಕೋವಿಡ್ ಸಮಯದಲ್ಲಿ ಸಮಾಜ ಸೇವಾ ವೇದಿಕೆ ಮುಕಾಂತರ 6000 ಕ್ಕೂ ಮಿಕ್ಕಿ ಆಹಾರ ಕಿಟ್ ನೀಡಿ ಬಡ ಜನರಿಗೆ ಸಹಾಯ ಮಾಡಿದ್ದಾರೆ ಹಲವಾರು ಸಮಾಜ ಸೇವೆ ಮಾಡಿರುವ ಕಾಪು ಬಂಟರ ಸಂಘದ ನಿರ್ದೇಶಕರು ಕೊಟ್ಟಾರಿ ಅಶ್ವತಕಟ್ಟೆ ಇದರ ಪ್ರದಾನ ವ್ಯವಸ್ಥಾಪಕರಾಗಿ ಹಲವಾರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ರಾಷ್ಟೀಯ ಪುರಸ್ಕೃತರಾದ ಏಷ್ಯಾ ಫೇಷಿಫಿಕ್ ಗೋಲ್ಡ್ ಸ್ಟಾರ್ ಅವಾರ್ಡ್ ದೆಹಲಿ, ಸದ್ಭವನ್ ಪುರಸ್ಕಾರ್ ಅವಾರ್ಡ್ ಗೋವಾ, ಕೈರಾಳಿ ಪ್ರಕಾಶನ ಕಾಸರಗೋಡು ವತಿಯಿಂದ ಸಮಾಜ ರತ್ನ ಅವಾರ್ಡ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಜಿಲ್ಲಾ ಸಾದಕ ಅವಾರ್ಡ್ ಇಷ್ಟು ಲಭಿಸಿದೆ ಹಾಗೂ ನೂರಾರು ಕಡೆ ಗುರುತಿಸಿ ಸನ್ಮಾನಿಸಲಾಗಿದೆ.

ನವೆಂಬರ್ 19ರಂದು ಭಾನುವಾರ ಕೇರಳ ರಾಜ್ಯದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇರಳ ವಿವಿಧ ಜಿಲ್ಲೆಯಲ್ಲಿ ಅನೇಕ ಕನ್ನಡಿಗರು ಭಾಗವಹಿಸಲಿದ್ದು ಇವರನ್ನು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ರಾಜ್ಯೋತ್ಸವ ನೀಡಲಿದ್ದೆವೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಕೇರಳ ಇದರ ಸಂಸ್ಥಾಪಕರಾದ ಎಸ್ ಪ್ರದೀಪ ಕಲ್ಕೂರ ಇವರು ತಿಳಿಸಿದ್ದಾರೆ.

ಪ್ರಶಸ್ತಿ ಪಡೆಯಲಿರುವ ಇವರಿಗೆ ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಶ್ರೀ ಕಟೀಲು ಕ್ಷೇತ್ರದ ಪ್ರದಾನ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ, ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು- ಮಲ್ಲಾರು ಧರ್ಮಗುರುಗಳಾದ ಅಬ್ದುಲ್ ರಶೀದ್ ಸಕಾಫಿ, ಶೇಖರ್ ಬಿ ಶೆಟ್ಟಿ ಕಳತ್ತೂರು ಕಾಪುವಿನ ಸಮಾಜ ಸೇವಕರಾದ ಫಾರೂಕ್ ಚಂದ್ರನಗರ, ದಿವಾಕರ ಡಿ ಶೆಟ್ಟಿ ಕಳತ್ತೂರು ಹಾಗೂ ಅನೇಕ ಗಣ್ಯರು ಅಭಿನಂದಿಸಿದರು.