ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ ರೋಟರಿ ಕ್ಲಬ್ ‌: ವರ್ಣ ವಿಹಾರ-2023

Posted On: 12-11-2023 03:38PM

ಪಡುಬಿದ್ರಿ : ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರ ಕಲೆಯ ಸವಿಯು ಸವಿದವನಿಗೆ ಗೊತ್ತು ಚಿತ್ರಕಲೆಯ ಬಗ್ಗೆ ತಿಳಿಯುವ ಮುನ್ನ ನಾವು ಕಲೆಯ ಬಗ್ಗೆ ಅರಿತು ಕೊಳ್ಳಲೇಬೇಕು. ಚಿತ್ರಕಲೆಯು ಮಗುವಿನ ಮಾನಸಿಕ ಬೆಳವಣಿಗೆಗೆ ಸ್ವಾಭಾವಿಕ ಸಾಧನ. ಪ್ರತಿಯೊಂದು ಮಗುವು‌ ಶ್ರೇಷ್ಠ ಕಲಾವಿದ. ಪ್ರತಿಶತ ಶೇ.80 ರಷ್ಟು ಮಕ್ಕಳು ತಾವು ಇಷ್ಟ ಪಡುವ‌ ಆಟಕ್ಕಿಂತಲು ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ಏಕಾಗ್ರತೆ ಹಾಗು ತಾಳ್ಮೆ ಇದ್ದರೆ ಎಷ್ಟೇ ಕಷ್ಟಕರವಾದ ಚಿತ್ರವನ್ನು ಬಿಡಿಸಬಹುದು" ಎಂದು ಖ್ಯಾತ ಚಿತ್ರ ಕಲಾವಿದ ಸೂರಾಜ್ ಮಂಗಳೂರು ನುಡಿದರು. ಅವರು ಪಡುಬಿದ್ರಿ ಸುಜಾತ ಆಡಿಟೋರಿಯಮ್ ನಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ ಇದರ ವತಿಯಿಂದ ನಡೆದ ವರ್ಣ ವಿಹಾರ-2023 ಉಡುಪಿ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾ.ಪಂ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ ಮಾಲಕ ಅಬ್ದುಲ್ ಹಮೀದ್, ಸರಸ್ವತಿ ಮಂದಿರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಎಸ್ ಅಚಾರ್ಯ, ರೋಟರಿ ಪೂರ್ವ ಅಧ್ಯಕ್ಷ ಗಣೇಶ್ ಅಚಾರ್ಯ, ಹೇಮಲತಾ ಸುವರ್ಣ ಉಪಸ್ಥಿತರಿದ್ದರು.

ಸ್ಪರ್ಧಾ ವಿಜೇತರ ವಿವರ : 1ರಿಂದ 4 ತರಗತಿ ವಿಭಾಗ - ಎಮ್ .ರಾಝಿಕ್ (ಪ್ರಥಮ), ಜಯಕೃಷ ಎಲ್ ಬಂಗೇರ (ದ್ವಿತೀಯ) 5 ರಿಂದ‌ 8 ನೇ ತರಗತಿ ವಿಭಾಗ - ಅನುಜ್ಞ (ಪ್ರಥಮ), ಅಮೀನಾ ಬಾನು (ದ್ವಿತೀಯ) 9 ರಿಂದ 12ನೇ ತರಗತಿ ವಿಭಾಗ - ಶುಭಾಶ್ರೀ (ಪ್ರಥಮ), ಸಮರ್ಥ ಜೋಶಿ (ದ್ವಿತೀಯ) ಸಾರ್ವಜನಿಕ ವಿಭಾಗ - ತಸ್ನೀನ್ ಅರಾ ಪಡುಬಿದ್ರಿ (ಪ್ರಥಮ), ಪ್ರತೀಕ್ ಶೆಟ್ಟಿ ಪಡುಬಿದ್ರಿ (ದ್ವಿತೀಯ)

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ‌ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ವಹಿಸಿದ್ದರು. ಮಾಜಿ ತಾ.ಪಂ ಸದಸ್ಯ ನವೀನಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷ ವೈ. ಸುಕುಮಾರ್, ಕನ್ನಡ ಚಲನಚಿತ್ರ ನಿರ್ಮಾಪಕ ಡಾ| ಸುರೇಶ್ ಕೋಟ್ಯಾನ್ ಚಿತ್ರಾಪು, ವಲಯ ಸೇನಾನಿ ರಿಯಾಜ್ ಮುದರಂಗಡಿ, ವಲಯ ಸಂಯೋಜಕ ರಮೀಜ್ ಹುಸೇನ್, ರೋಟರಿ ಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್, ಪಡುಬಿದ್ರಿ ಕೆನರಾ ಬ್ಯಾಂಕ್ ಪ್ರಬಂಧಕಿ ವಿಜಯ ಕಾಮತ್, ಚಲನಚಿತ್ರ ನಟಿ, ರೂಪದರ್ಶಿ ಕು.ತೃಪ್ತಿ, ಕಾರ್ಯಕ್ರಮ ನಿರ್ದೇಶಕ ರಾದ ಗಣೇಶ್ ಅಚಾರ್ಯ ಎರ್ಮಾಳ್, ತಸ್ನೀನ್ ಅರಾ, ಹೇಮಲತಾ ಸುವರ್ಣ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ‌ಸ್ವಾಗತಿಸಿದರು. ಬಿ.ಎಸ್. ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.