ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಕಾಪು ಇವರ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ಕಾಪುವಿನ ದಂಡತೀರ್ಥ ಶಾಲಾ ಮೈದಾನದಲ್ಲಿ ಡಿಸೆಂಬರ್ 30 - 31 ರಂದು ಬಿರುವೆರ್ ಕಾಪು ಟ್ರೋಫಿ -2023 ಕ್ರಿಕೆಟ್ ಪಂದ್ಯಾಕೂಟ ನಡೆಯಲಿದ್ದು ಇದರ ವಿಜ್ಞಾಪನ ಪತ್ರವನ್ನು ಕಾಪು ಜೆಸಿ ಭವನದಲ್ಲಿ ನವೆಂಬರ್ 18ರಂದು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಕ್ರಿಕೆಟ್ ಪಂದ್ಯಾಟದ ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರಾಗಿ ದೀಪಕ್ ಕುಮಾರ್ ಎರ್ಮಾಳು ಇವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಕಾರ್ಯತಂತ್ರ ರೂಪಿಸಲು ಸಂಸ್ಥೆಯ ಅಧ್ಯಕ್ಷರನ್ನೊಳಗೊಂಡ ಸದಸ್ಯರನ್ನೂ ನೇಮಿಸಲಾಯಿತು.
ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳ್, ಸಂಸ್ಥೆಯ ಅಧ್ಯಕ್ಷರಾದ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಮಸ್ಕತ್, ರಾಕೇಶ್ ಕುಂಜೂರು, ರವಿರಾಜ್ ಶಂಕರಪುರ, ಯೋಗೀಶ್ ಪೂಜಾರಿ ಕಾಪು , ಪ್ರಶಾಂತ್ ಪೂಜಾರಿ ಕಾಪು , ಪ್ರಸಾದ್ ಪೂಜಾರಿ ಅದಮಾರ್ , ಯಾದವ ಪೂಜಾರಿ ಕಾಪು , ಸುಜನ್ ಎಲ್ ಸುವರ್ಣ ಶಿರ್ವ, ಅನಿಲ್ ಅಮೀನ್ ಕಾಪು, ಕಾರ್ತಿಕ್ ವಿ ಸುವರ್ಣ ಮೂಳೂರು, ವರುಣ್ ಬಿ ಕೋಟ್ಯಾನ್ ಕಲ್ಯಾಲ್, ಸಂಧ್ಯಾ ಬಿ ಕೋಟ್ಯಾನ್ ಕಲ್ಯಾಲ್ ಆನ್ ಲೈನ್ ಮೂಲಕ ಭಾಸ್ಕರ ಅಂಚನ್ ಕಲ್ಲುಗುಡ್ಡೆ ಕುವೈಟ್, ಗಣೇಶ್ ಕೋಟ್ಯಾನ್ ಮಲ್ಲಾರ್ ಕುವೈಟ್ ಉಪಸ್ಥಿತಿಯಿದ್ದರು.