ಹೆಜಮಾಡಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಆಚರಣೆ
Posted On:
25-11-2023 06:17PM
ಹೆಜಮಾಡಿ : ಹಬ್ಬಗಳು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಅಚರಣೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ರವಾನಿಸಲು ವೇದಿಕೆಯಾಗಿದೆ. ಈ ಹಬ್ಬಗಳ ಮೂಲಕ ಯುವಕರು ತಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ವಿವಿಧ ಪದ್ದತಿಗಳು ಹಾಗು ಆಚರಣೆಗಳ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಕೂಡು ಕುಟುಂಬ ಒಡೆದು ಹೋಗಿರುವುದರಿಂದ ಹಬ್ಬಗಳ ಮಹತ್ವ ಕಳೆದು ಹೋಗಿದೆ. ಪುರಾಣದ ಹಿನ್ನೆಲೆಯುಳ್ಳ ಇಂತಹ ಹಬ್ಬಗಳನ್ನು ವಿವಿಧ ಧರ್ಮದ ಜನರನ್ನು ಸೇರಿಸಿ ಸೌಹಾರ್ದತೆಯ ರೀತಿಯಲ್ಲಿ ಅಚರಿಸುತಿರುವ ಹೆಜಮಾಡಿ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು
ಪ್ರವಚನಕಾರ, ಯಕ್ಷಗಾನ ಕಲಾವಿದ ಭಾಸ್ಕರ್ ಪಡುಬಿದ್ರಿ ಹೇಳಿದರು.
ಅವರು ಹೆಜಮಾಡಿ ಬಿಲ್ಲವ ಸಂಘದಲ್ಲಿ ಹೆಜಮಾಡಿ ಯುವವಾಹಿನಿ (ರಿ.) ವತಿಯಿಂದ ನಡೆದ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಕಾರ್ಯಕ್ರಮದಲ್ಲಿ ತುಡರ್ ದೀಪ ಬೆಳಗಿಸಿ ಮಾತಾನಾಡಿದರು.
ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಕೃಷಿಕ ಹೆಜಮಾಡಿ ಶೇಖರ್ ಕುಕ್ಯಾನ್ ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಭರತೇಶ್, ಉದ್ಯಮಿ ಜೋನ್ ಕ್ವಾಡ್ರಸ್, ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷ ರಮೀಜ್ ಹುಸೇನ್, ಕಾರ್ಯಕ್ರಮ ನಿರ್ದೇಶಕ ಮಹೇಂದ್ರ ಸಾಲ್ಯಾನ್, ಹೆಜಮಾಡಿ ಯುವವಾಹಿನಿ ಕಾರ್ಯದರ್ಶಿ ನಾಗವೇಣಿ ಉಪಸ್ಥಿತರಿದ್ದರು.
ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ. ಕೋಟ್ಯಾನ್ ಸ್ವಾಗತಿಸಿದರು. ಹೆಜಮಾಡಿ ಯುವವಾಹಿನಿಯ ಗೌರವ ಸಲಹೆಗಾರ ಪ್ರಭೋಧ್ ಚಂದ್ರ ಹೆಜ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ಕರ್ಕೇರ ಮತ್ತು ಧೀರಜ್ ಹೆಜಮಾಡಿ ನಿರೂಪಿಸಿದರು. ಕುಮಾರಿ ಪ್ರಾಪ್ತಿ ಹೆಜಮಾಡಿ ವಂದಿಸಿದರು.