ಕಾಪು : ವಿಶ್ವೇಶತೀರ್ಥ ವಿದ್ಯಾಲಯದ ನೂತನ ಶಾಲಾ ಕಟ್ಟಡ ಉದ್ಘಾಟನೆ
Posted On:
30-11-2023 02:51PM
ಕಾಪು : ಊರು ಉದ್ಧಾರವಾಗಲು ಮಂದಿರ, ಶಾಲೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇರಬೇಕು. ಊರೊಳಗೆ ಈ ಎಲ್ಲಾ ವ್ಯವಸ್ಥೆಗಳು ಇದ್ದಲ್ಲಿ ಸಮಗ್ರ ಬೆಳವಣಿಗೆ ಕಾಣಲು ಸಾಧ್ಯ. ಉತ್ತಮ ಶಿಕ್ಷಣ ಬದುಕಿನಲ್ಲಿ ಸಾರ್ಥಕತೆ ಗಳಿಸಲು ಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ವಿದ್ಯಾಸಾಗರ ಎಜಕೇಶನ್ ಟ್ರಸ್ಟ್ ಇದರ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆ ಕೈಪುಂಜಾಲು ಚೆನ್ನಪ್ಪ ಸಾಹುಕಾರ್ ರವರ ಸ್ಮರಣಾರ್ಥ ವಿಶ್ವೇಶತೀರ್ಥ ವಿದ್ಯಾಲಯದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಶಾಲೆಯ ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿದ ಉಡುಪಿಯ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್ ಮಾತನಾಡಿ ಸತೀಶ್ ಕುಂದರ್ ತಂಡದಿಂದ ಈ ಶಿಕ್ಷಣ ಸಂಸ್ಥೆ ಮೂಡಿ ಬಂದಿದೆ. ದಾನಿಗಳು ಶಿಕ್ಷಣ ಸಂಸ್ಥೆಗೆ ತಮ್ಮಿಂದಾದ ಸಹಾಯ ಮಾಡಬಹುದು. ಆದರೆ ಸಂಸ್ಥೆಯ ಬೆಳವಣಿಗೆಯು ಉತ್ತಮ ಸಂಸ್ಕಾರಯುತ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಈ ಜವಾಬ್ದಾರಿ ಶಿಕ್ಷಕ ವರ್ಗಕ್ಕಿದೆ ಎಂದರು.
ಸಮ್ಮಾನ : ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಪೇಜಾವರ ಶ್ರೀಗಳನ್ನು ವಿವಿಧ ಫಲಗಳ ಸಹಿತ ಪುಷ್ಪ ಸಿಂಚನದೊಂದಿಗೆ ಗೌರವಿಸಲಾಯಿತು. ಉಡುಪಿಯ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್, ಬೆಂಗಳೂರಿನ ಏಸ್ ಸಂಸ್ಥೆಯ ಅಧ್ಯಕ್ಷ ರಾಮದಾಸ್ ಪುತ್ತಿಗೆ, ಶಾಲಾ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸತೀಶ್ ಕುಂದರ್, ರವಿ ಕುಮಾರ್, ಲಕ್ಷ್ಮೀಶ ತಂತ್ರಿ ಮೊದಲಾದವರನ್ನು ಪೇಜಾವರ ಶ್ರೀಗಳು ಸಮ್ಮಾನಿಸಿದರು.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬೆಂಗಳೂರಿನ ಏಸ್ ಸಂಸ್ಥೆಯ ಅಧ್ಯಕ್ಷ ರಾಮದಾಸ್ ಪುತ್ತಿಗೆ, ಕಾಪು ದೇವಿಪ್ರಸಾದ್ ಕನ್ ಸ್ಟ್ರಕ್ಷನ್ ನ ವಾಸುದೇವ ಶೆಟ್ಟಿ, ಮತ್ಸ್ಯೋದಮಿಗಳಾದ ಸಾಧು ಸಾಲ್ಯಾನ್, ಹರಿಯಪ್ಪ ಸಾಲ್ಯಾನ್, ಪಾಜಕ ಆನಂದ ತೀರ್ಥ ವಿದ್ಯಾಲಯದ ಕಾರ್ಯದರ್ಶಿ ಬಿ. ಸುಬ್ರಹ್ಮಣ್ಯ ಸಾಮಗ, ಶಿಕ್ಷಣ ತಜ್ಞ ವಾಸುದೇವ ಭಟ್, ಕಾಪು ದಂಡತೀರ್ಥ ಪ್ರತಿಷ್ಠಾನದ ಸೀತಾರಾಮ ಭಟ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಪ್ರಭಾಕರ ಪೂಜಾರಿ, ನಾಗರಾಜ ಸುವರ್ಣ, ಪ್ರವೀಣ್ ಶ್ರೀಯಾನ್, ಚಂದ್ರಶೇಖರ ಅಮೀನ್, ಮುಖ್ಯ ಶಿಕ್ಷಕ ಸಾಕ್ಷತ್ ಯು.ಕೆ, ದಯಾವತಿ ಕುಂದರ್, ವಿನೋದ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.