ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುಂದಾಪುರ : ನಕಲಿ ಅಲೋಪತಿ ಡಾಕ್ಟರ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ

Posted On: 07-12-2023 12:05PM

ಕುಂದಾಪುರ : ಆಯುರ್ವೇದಿಕ್ ವೈದ್ಯ ಅಲೋಪತಿ ಪ್ರಾಕ್ಟೀಸ್ ಮಾಡುತ್ತಿದ್ದರು ಎನ್ನುವ ಸಾರ್ವಜನಿಕರ ದೂರಿನ ಮೇರೆಗೆ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಕ್ಲಿನಿಕ್ ಒಂದರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ನಕಲಿ ಅಲೋಪತಿ ಡಾಕ್ಟರ್ ಪರ್ಜಿತ್ ನಂಬಿಯಾರ್ ಕ್ಲಿನಿಕ್ ಮೇಲೆ ಹಠಾತ್ ದಾಳಿ ನಡೆಸಿ ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾ. ಪ್ರೇಮಾನಂದ್ ಮತ್ತು ತಂಡ ಪರಿಶೀಲಿಸಿದಾಗ ಇವರ ಕ್ರಾಸ್ ಪ್ರಾಕ್ಟೀಸ್ ಸಾಬೀತಾಗಿದೆ ಇವರ ಮೇಲೆ FIR ದಾಖಲಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಕಳೆದ ಒಂದು ವರ್ಷದ ಹಿಂದೆಯೂ ಸ್ಟಿಂಗ್ ಪತ್ರಕರ್ತ ಕಿರಣ್ ಪೂಜಾರಿಯವರು ಈತನ ಕ್ರಾಸ್ ಪ್ರಾಕ್ಟೀಸ್ ಅನ್ನು ಸಾಬೀತುಪಡಿಸಿ ದಾಖಲೆ ನೀಡಿದರು ಸಹ ಅಂದಿನ ತಾಲೂಕು ಆರೊಗ್ಯಾಧಿಕಾರಿ ಡಾ. ರಾಜೇಶ್ವರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ನಾಗಭೂಷಣ್ ಉಡುಪ ಹಾಗೂ ರಾಜಕೀಯದವರ ಶ್ರೀರಕ್ಷೆಯಿಂದ ಈತನ ಕೃತ್ಯವನ್ನು ಮುಚ್ಚಿ ಹಾಕಲಾಗಿತ್ತು. ತದನಂತರ ಸಹ ಈತ ರಾಜಾರೋಷವಾಗಿ ಅಲೋಪತಿ ಮೆಡಿಸಿನ್ ಅನ್ನು ನೀಡುತ್ತಿದ್ದ ಕಾರಣ ಸಾರ್ವಜನಿಕರು ಈಗಿನ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ರವರ ಗಮನಕ್ಕೆ ತಂದಿದ್ದರು.

ಕುಂದಾಪುರ ಮತ್ತು ಬೈಂದೂರಿಗೆ ಒಬ್ಬ ದಕ್ಷ ಅಧಿಕಾರಿಯ ಅಗತ್ಯ ಇತ್ತು. ಮುಂದಿನ ದಿನಗಳಲ್ಲಿ ನಕಲಿ ಅಲೋಪತಿ ಡಾಕ್ಟರ್ ಗಳ ಹಾವಳಿಯನ್ನು ತಪ್ಪಿಸುವ ಸೂಚನೆ ದೊರೆತಿದೆ. ಸಾರ್ವಜನಿಕ ವಲಯದಲ್ಲಿ ಡಾ. ಪ್ರೇಮಾನಂದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.