ಪಡುಬಿದ್ರಿ : ಇಲ್ಲಿನ ಕರಾವಳಿ ಸ್ಟಾರ್ಸ್ ನಡಿಪಟ್ನ
ಸಂಸ್ಥೆಯ 14 ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಸಾಗರ್ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ಸಾಗರ್ ದರ್ಶಿನಿ ವೇದಿಕೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಕಾಡಿಪಟ್ನ ನಡಿಪಟ್ನ ವಿದ್ಯಾಪ್ರಚಾರಕ ಸಂಘದ ಅಧ್ಯಕ್ಷರಾದ ಸುಕುಮಾರ್ ಶ್ರೀಯನ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ನಡಿಪಟ್ನ ಮೊಗವೀರ ಸಭಾದ ಅಧ್ಯಕ್ಷ ಗಂಗಾಧರ ಕರ್ಕೇರ, ಕಾಡಿಪಟ್ನ ಮೊಗವೀರ ಸಭಾದ ಅಧ್ಯಕ್ಷ
ಅಶೋಕ್ ಸಾಲಿಯಾನ್, ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಶರತ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರಿಕಾ ಸಮಿತಿ ಅಧ್ಯಕ್ಷ
ವಿಶ್ವಾಸ್ ವಿ ಅಮೀನ್, ಬಂಟರ ಸಂಘ ಪಡುಬಿದ್ರಿ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಖಾದಿ ಮತ್ತು ಗ್ರಾಮೋದ್ಯೋಗ ಸಂಘ ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಮಿಥುನ್ ಆರ್ ಹೆಗ್ಡೆ, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯ ಶರಣ್ ಕುಮಾರ್ ಮಟ್ಟು, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯೆ ವಿದ್ಯಾಶ್ರೀ ಯತಿನ್ ಬಂಗೇರ, ಪಡುಬಿದ್ರಿ ಕಾಡಿಪಟ್ನ ನಡಿಪಟ್ನ ವಿದ್ಯಾ ಪ್ರಚಾರಕ ಸಂಘದ ಕಾರ್ಯದರ್ಶಿ ಹರೀಶ್ ಪುತ್ರನ್, ಮಂಗಳೂರಿನ ಅಮೃತ ವಿದ್ಯಾಲಯಂ ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಶನ್ ಕಾರ್ನಾಡ್ ಕಾರ್ಯದರ್ಶಿ ಪ್ರಶಾಂತ್ ಕಾಂಚನ್, ಎಂ ಎಸ್ ಗ್ರೂಪ್ ಪಡುಬಿದ್ರಿ ಮಾಲಿಕ ಮನ್ಸೂರ್ ಎಂ ಎಸ್, ಸಾಗರ್ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ ಪಡುಬಿದ್ರಿ ಮುಖ್ಯ ಶಿಕ್ಷಕಿ ಪದ್ಮಶ್ರೀ, ಹಳ್ಳಿ ಮನೆ ರೆಸ್ಟೋರೆಂಟ್ ಮೂಳೂರು ಮಾಲಿಕರಾದ ನಯೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕರಾವಳಿ ಸ್ಟಾರ್ಸ್ ನಡಿಪಟ್ನದ ಸಂಸ್ಥಾಪಕ ಕಿರಣ್ ರಾಜ್ ಕರ್ಕೇರ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿಯಾದ ಸಂತೋಷ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ವಿಘ್ನೇಶ್ ರಾವ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸರಸ್ವತಿ ಕಲಾ ಕೇಂದ್ರದ ಸದಸ್ಯರಿಂದ ಶ್ರೀ ಕೊಲ್ಲೂರು ಮೂಕಾಂಬಿಕಾ ಮಹಾತ್ಮೆ ನೃತ್ಯ ವೈಭವ, ಅರುಣ್ ಕಾಪು ಅವರಿಂದ ಸಂಗೀತ ಸಂಜೆ, ಸಂಸ್ಥೆಯ ಸದಸ್ಯರಿಂದ ನೃತ್ಯ ವೈವಿಧ್ಯ ಮತ್ತು ಹರೀಶ್ ಪಡುಬಿದ್ರಿಯವರ ತೊಟ್ಟಿಲ್ ನಾಟಕ ಪ್ರದರ್ಶನಗೊಂಡಿತು.