ಪಡು ಕುತ್ಯಾರು : ಆನೆಗುಂದಿ ಮಠ - ಡಿಸೆಂಬರ್ 25ರಿಂದ ಯಕ್ಷಗಾನ ತಾಳಮದ್ದಲೆ ಸಪ್ತಾಹ 2023
Posted On:
21-12-2023 05:31PM
ಪಡುಕುತ್ಯಾರು : ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ 2023 ದಶಂಬರ 25ರಿಂದ ದಶಂಬರ 31ರವರೆಗೆ ತೃತೀಯ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ 2023 ನಡೆಯಲಿದೆ.
ಪಡುಕುತ್ಯಾರಿನ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆಯುವ ಯಕ್ಷಗಾನ ಸಪ್ತಾಹದಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ ಮತ್ತು ಪೂರ್ಣಾನುಗ್ರಹದೊಂದಿಗೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ 2023ರ ಡಿಸೆಂಬರ್ 25 ರಂದು ಅಪರಾಹ್ನ 2.30ಕ್ಕೆ ಯಕ್ಷಗಾನ ಸಪ್ತಾಹ 2023 ರ ಉದ್ಘಾಟನೆಯನ್ನು ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನದ ಮೂಲಕ ನೆರವೇರಿಸುವರು. ಆನೆಗುಂದಿ ಪ್ರತಿಷ್ಠಾನ ಮುಂಬಯಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಟಿ. ಆಚಾರ್ಯ ಮುಂಬೈ ದಿಕ್ಸೂಚಿ ಭಾಷಣ ಮಾಡುವರು. ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ವಿಧಾನ ಸಭಾ ಕ್ಷೇತ್ರ ಶಾಸಕ ಹಾಗೂ ಯಕ್ಷಗಾನ ಕಲಾ ಪೋಷಕರಾದ ಸುರೇಶ್ ಶೆಟ್ಟಿ ಗುರ್ಮೆ ಭಾಗವಹಿಸುವರು.
ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ಕೆ. ಉಪಸ್ಥಿತರಿರುವರು.
ಡಿಸೆಂಬರ್ 31 ಅಪರಾಹ್ನ 2.30ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ
ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ ವಾಸುದೇವ ರಾವ್ ಸುರತ್ಕಲ್, ರುದ್ರಯ್ಯ ಆಚಾರ್ಯ ಕೋಟ, ಸದಾಶಿವ ಆಚಾರ್ಯ ಬೈಲೂರು, ಶಂಕರ ಆಚಾರ್ಯ ಕೊಳ್ಯೂರು, ಭಾಸ್ಕರ್ ಜಿ. ಪೂಜಾರಿ ಕಟಪಾಡಿ, ರಾಘು ಎಸ್., ಗುಜರನ್ ಉಚ್ಚಿಲ, ವಾಮನ ಆಚಾರ್ಯ ಬೋವಿಕ್ಕಾನ ಕಾಸರಗೋಡು ಎಂಬೀ 7 ಮಂದಿ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ.
ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಸಂಪನಗೊಳ್ಳುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ, ವಡೇರಹೋಬಳಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು, ಹಾಗೂ ಯಕ್ಷಗಾನ ಕಲಾ ಪೋಷಕರಾದ ಎಂ. ಮಿಥುನ್ ರೈ, ಮಂಗಳೂರು ಭಾಗವಹಿಸುವರು. ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ , ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ, ಮಂಗಳೂರು, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಪ್ರತಿಷ್ಠಾನದ ಹಿರಿಯ ವಿಶ್ವಸ್ಥರಾದ ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಸರಸ್ವತೀ ಪೂರ್ವ ವಿದ್ಯಾರ್ಥಿ ವೃಂದದ ಅಧ್ಯಕ್ಷ ಕೇಶವ ಶರ್ಮಾ ಇರುವೈಲು ಉಪಸ್ಥಿತರಿರುವರು.
ಯಕ್ಷಗಾನ ತಾಳಮದ್ದಲೆ ಸಪ್ತಾಹ 2023 ಸಂಯೋಜಕ ಜನಾರ್ಧನ ಆಚಾರ್ಯ ಕನ್ಯಾನ, ಆನೆಗುಂದಿ ಸರಸ್ವತೀ ಗೋವು -ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ) ಪ್ರಧಾನ ಕಾರ್ಯದರ್ಶಿ, ಡಿ. ಸುರೇಶ್ ಆಚಾರ್ಯ, ಕಟಪಾಡಿ , ಅಸೆಟ್ ಪ್ರಧಾನ ಕಾರ್ಯದರ್ಶಿ ಗುರುರಾಜ ಆಚಾರ್ಯ ಕೆ.ಜೆ, ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಸರಸ್ವತೀ ಪೂರ್ವ ವಿದ್ಯಾರ್ಥಿ ವೃಂದದ ಸಹ ಕಾರ್ಯದರ್ಶಿ ಮನೋಜ್ ಶರ್ಮಾ, ಪಡುಕುತ್ಯಾರು , ರಮಾ ನವೀನ್ ಆಚಾರ್ಯ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಸರಸ್ವತೀ ಮಾತೃಮಂಡಳಿ ಪಡುಕುತ್ಯಾರು, ಐ. ಲೋಲಾಕ್ಷ ಶರ್ಮಾ ಪ್ರಧಾನ ಕಾರ್ಯದರ್ಶಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ, ಪಡುಕುತ್ಯಾರು ಇವರು ಪ್ರತಿ ದಿನಗಳ ಕಾರ್ಯಕ್ರಮದ ವ್ಯವಸ್ಥೆಯ ನೇತೃತ್ವವಹಿಸಲಿದ್ದಾರೆ ಎಂದು ಆನೆಗುಂದಿ ಪ್ರತಿಷ್ಠಾನ ಕಟಪಾಡಿ ಪಡುಕುತ್ಯಾರು ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.