ಉಡುಪಿ : ನಾಯಕತ್ವ ಎಂಬುದು ಒಂದು ಅವಕಾಶ - ಡಾ| ಗೀತಾಮಯ್ಯ
Posted On:
24-12-2023 06:27PM
ಉಡುಪಿ : ನಾಯಕತ್ವ ಎಂಬುದು ಒಂದು ಅವಕಾಶ ಅದನ್ನು ಬಳಸಿಕೊಂಡು ಸಮಾಜದ ವಿವಿಧ ಸ್ಥರದಲ್ಲಿರುವ ಜನರ ಸೇವೆ ಮಾಡುವ ಮೂಲಕ ನಮ್ಮ ಜೀವನವನ್ನು ಸಾರ್ಥಕಗೊಳಿಸಬಹುದು ಎಂದು ಮಾಹೆ ಮಣಿಪಾಲ ವಿ.ವಿಯ ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ಡಾ| ಗೀತಾಮಯ್ಯ ಹೇಳಿದರು.
ಅವರು ಡಿಸೆಂಬರ್ 23 ರಂದು ಬಡಗು ಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಜಗನ್ನಾಥ ಸಭಾಭವನದಲ್ಲಿ ನಡೆದ ಜೆಸಿಐ ಉಡುಪಿ ಸಿಟಿ ಇದರ 2024 ನೇ ಸಾಲಿನ ಪದ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರಸಭಾ ಸದಸ್ಯ ವಿಜಯ್ ಕೊಡವೂರು, ಸಮಾಜದಲ್ಲಿ ನಾವು ವಿವಿಧ ಋಣಗಳಿಂದ ಬದುಕುತ್ತಿದ್ದೇವೆ ಈ ಋಣವನ್ನು ತೀರಿಸಬೇಕಾದರೆ ನಾವು ಬಡವರ ಸೇವೆ ಮಾಡಬೇಕೆಂದರು.
ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಅಂತರಾಷ್ಟ್ರೀಯ ಸಂಸ್ಥೆಗಳು ಶತಮಾನ ಕಂಡಿವೆ ಲಯನ್ಸ್ ರೋಟರಿ ಮತ್ತು ಜೀಸಿಗಳು ಮಾಡುತ್ತಿರುವ ಕಾಯ೯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರಧಾನ ಮತ್ತು 18 ಜನ ನೂತನ ಸದಸ್ಯರ ಪ್ರಮಾಣವಚನ ನಡೆಯಿತು. ಪೂರ್ವ ಅಧ್ಯಕ್ಷರಾದ ಸಂದೀಪ್ ಕುಮಾರ್ -ತನುಜಾ ಮಾಬೇನ್ ಅವರನ್ನು ಗೌರವಿಸಲಾಯಿತು.
ವಲಯ ಉಪಾಧ್ಯಕ್ಷ ದೀಪಕ್ ರಾಜ್ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಪೂರ್ವ ಅಧ್ಯಕ್ಷ ವಕೀಲರಾದ ವಿನಯ್ ಆಚಾರ್ಯ ಮುಡ್ಕೂರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಖ್ಯಾತ ಸಮಾಜ ಸೇವಕ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷೆ ಡಾ| ಹರಿಣಾಕ್ಷಿ ಕರ್ಕೇರ ವಹಿಸಿದ್ದರು. ಪದಾಧಿಕಾರಿಗಳಾದ ಕಿರಣ್ ಭಟ್, ಸಂಧ್ಯಾ ಕುಂದರ್, ನಯನ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.